ನವದೆಹಲಿ: ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಸೋಮವಾರ ಭಾರತ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಇದುವರೆಗೆ ದೇಶದ ಒಟ್ಟು ಪದಕಗಳ ಸಂಖ್ಯೆ 20ಕ್ಕೆ ಏರಿದೆ.
ರೊನಾಲ್ಡೊ ಸಿಂಗ್ ಒಂದು ಕಿಲೋಮೀಟರ್ ಟೈಮ್ ಟ್ರಯಲ್ ಈವೆಂಟ್‌ನಲ್ಲಿ ಅಂತಾರಾಷ್ಟ್ರೀಯ ಪದಕ ಗೆದ್ದ ಮೊದಲ ಭಾರತೀಯರಾದರು. ವಿಶ್ವ ಜೂನಿಯರ್ ಚಾಂಪಿಯನ್ ಮತ್ತು ಏಷ್ಯನ್ ದಾಖಲೆ ಹೊಂದಿರುವ ರೊನಾಲ್ಡೊ ಅವರು 58.254 ಕಿ.ಮೀ ವೇಗದಲ್ಲಿ ಸೈಕ್ಲಿಂಗ್ ತುಳಿದು 1:1:798 ನಿಮಿಷ ಗುರಿ ಮುಟ್ಟುವ ಮೂಲಕ ಮೂರನೇ ಸ್ಥಾನವನ್ನು ಅಲಂಕರಿಸಿದರು.
ಓದಿ:ಅಧಿಕೃತ ಕಾರು ಇದ್ದರೂ 300 ಕಿ.ಮೀ. ಸೈಕ್ಲಿಂಗ್ ಮಾಡಿದ ಅಧಿಕಾರಿ.. ಕಾರಣ ಏನು ಎಂದರೆ?
ಈ ಸ್ಪರ್ಧೆಯಲ್ಲಿ ಜಪಾನ್‌ನ ಯುಟಾ ಒಬಾರಾ 1:01:118 ನಿಮಿಷದಲ್ಲಿ 59.902 ಕಿ.ಮೀ ವೇಗದಲ್ಲಿ ಸೈಕ್ಲಿಂಗ್ ಮಾಡಿ ಮೊದಲ ಸ್ಥಾನ ಹಾಗೂ ಮಲೇಷ್ಯಾದ ಮೊಹಮದ್ ಫಾದಿಲ್ 1:1:639 ನಿಮಿಷದಲ್ಲಿ ಸೈಕಲ್ ತುಳಿದು ಗುರಿ ತಲುಪುವ ಮೂಲಕ ಎರಡನೇ ಸ್ಥಾನ ಪಡೆದರು.
ಪುರುಷರ ಜೂನಿಯರ್ ವಿಭಾಗದಲ್ಲಿ 10 ಕಿ.ಮೀ.ಗಳ 40 ಲ್ಯಾಪ್‌ಗಳ ಸ್ಪರ್ಧೆಯಲ್ಲಿ ಬಿರ್ಜಿತ್ ಯುಮ್ನಮ್ ಭಾರತಕ್ಕೆ ಮೂರನೇ ದಿನ ಎರಡನೇ ಪದಕವನ್ನು ಗೆದ್ದುಕೊಟ್ಟರು. ಅವರು 35 ನೇ ಲ್ಯಾಪ್‌ನ ನಂತರ ಲಿಯಾ ಕರ್ಬುಟೋವ್ (ಕಜಕಿಸ್ತಾನ್) ಮತ್ತು ಅಮೀರ್ ಅಲಿ (ಇರಾನ್) ಅವರನ್ನು ಸೋಲಿಸಿ ಮೂಲಕ ಪದಕಕ್ಕೆ ಮುತ್ತಿಟ್ಟರು.
ಈ ಸ್ಪರ್ಧೆಯಲ್ಲಿ ಕೊರಿಯಾದ ಹ್ವಾರಾಂಗ್ ಕಿಮ್ ಚಿನ್ನ ಗೆದ್ದರೆ, ಮಲೇಷ್ಯಾದ ಜುಲ್ಫಾಮಿ ಐಮನ್ ಬೆಳ್ಳಿ ಪದಕ ಗೆದ್ದರು.