ಹ್ಯಾಂಗ್ಝೌ:ಪ್ಯಾರಾ ಏಷ್ಯನ್ ಗೇಮ್ಸ್ನ 5ನೇ ದಿನ ಚಿನ್ನ ಗೆಲ್ಲುವ ಮೂಲಕ ಭಾರತೀಯ ಪ್ಯಾರಾ ಅಥ್ಲೀಟ್ಸ್ಗಳು ಶುಭಾರಂಭ ಮಾಡಿದ್ದಾರೆ. ಇಂದು ಒಟ್ಟು 5 ಚಿನ್ನದ ಪದಕಗಳನ್ನು ಗೆದ್ದಿರುವ ಭಾರತ ಪದಗಳ ಬೇಟೆಯನ್ನು ಮುಂದುವರೆಸಿದೆ. ಪುರುಷರ 1500 ಮೀ - ಟಿ38 ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥ್ಲೀಟಿ ರಮಣಾ ಶರ್ಮಾ ಚಿನ್ನವನ್ನು ಗೆದ್ದಿದ್ದಾರೆ. 4.20.80 ಮಿ. ಸೆಕೆಂಡ್ನಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ.
ಬ್ಯಾಡ್ಮಿಂಟನ್ನಲ್ಲಿ ಸ್ವರ್ಣ ಪದಕ:ಪುರುಷರ ಡಬಲ್ಸ್-ಎಸ್ಎಲ್3 ಮತ್ತು ಎಸ್ಎಲ್4 ವಿಭಾಗದಲ್ಲಿ ಪ್ಯಾರಾ ಷಟ್ಲರ್ಗಳಾದ ನಿತೇಶ್ ಮತ್ತು ತರುಣ್ ಜೋಡಿ ಇಂಡೋನೇಷ್ಯಾದ ಫೆಡ್ರಿ ಸೆಟಿಯಾವಾನ್ ಮತ್ತು ದ್ವಿಯೊಕೊ ಜೋಡಿಯನ್ನು 2-1 ಅಂತರದಿಂದ ಮಣಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್ ಎಸ್ಎಲ್4 ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸುಹಾಸ್ ಯತೀರಾಜ್ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮಹಿಳೆಯರ ಸಿಂಗಲ್ಸ್ ಎಸ್ಯು5 ಬ್ಯಾಡ್ಮಿಂಟನ್ನಲ್ಲಿ ತುಳಸಿಮತಿ ಅವರು ಚೀನಾದ ಕ್ವಿಕ್ಸಿಯಾ ಯಾಂಗ್ ವಿರುದ್ಧ 2-0 ಅಂತರದಿಂದ ಗೆದ್ದು ಚಿನ್ನವನ್ನು ಗೆದ್ದಿದ್ದಾರೆ.
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್ -ಎಸ್ಎಲ್3 ಬ್ಯಾಡ್ಮಿಂಟನ್ನಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್ - ಎಸ್ಎಲ್6 ಬ್ಯಾಡ್ಮಿಂಟನ್ನಲ್ಲಿ ನಿತೇಶ್ ಬೆಳ್ಳಿ, ಪುರುಷರ ಸಿಂಗಲ್ಸ್-ಎಸ್ಹೆಚ್6ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪ್ಯಾರಾ ಅಥ್ಲೀಟ್ ಕೃಷ್ಣ ನಗರ್ ಬೆಳ್ಳಿಪದಕವನ್ನು ಜಯಿಸಿದ್ದಾರೆ. ಪಂದ್ಯದಲ್ಲಿ ಚೀನಾದ ಕೈ ಮನ್ ಚೂ ವಿರುದ್ಧ ಕಠಿಣ ಸ್ಪರ್ಧೆಯೊಡ್ಡಿ ಗೆಲವು ದಾಖಲಿಸಿದ್ದಾರೆ.