ನವದೆಹಲಿ:ಭಾರತದ ಯುವ ಪ್ರತಿಭೆಗಳಾದ ಅನ್ಶು ಮಲಿಕ್ ಮತ್ತಯ ಸೋನಮ್ ಮಲಿಕ್ ಏಷ್ಯನ್ ಕ್ವಾಲಿಫೈಯರ್ನಲ್ಲಿ ಆಕರ್ಷಕ ಪ್ರದರ್ಶನ ತೋರಿಸಿ ಜೂನಿಯರ್ ನಿಂದ ಸೀನಿಯರ್ಹಂತಕ್ಕೆ ತೇರ್ಗಡೆಯಾಗಿದ್ದಲ್ಲದೆ, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.
ಕಜಕಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ ಅರ್ಹತಾ ಕುಸ್ತಿ ಟೂರ್ನಿಯಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 18 ವರ್ಷದ ಸೋನಮ್ ಮಲಿಕ್ 62 ಕೆಜಿ ವಿಭಾಗದಲ್ಲಿ ಅಯೌಲಿಮ್ ಕಾಸಿಮೋವಾ ವಿರುದ್ಧ 0-6 ಹಿನ್ನಡೆಯ ಹೊರೆತಾಗಿಯೂ ಅಂತಿಮವಾಗಿ 9-6ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು. ಅಲ್ಲದೇ ಇದೆ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಳ್ಳುತ್ತಿದ್ದಂತೆ ಕಳೆದ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದ ಸಾಕ್ಷಿ ಮಲಿಕ್ ಅವರ ಒಲಿಂಪಿಕ್ಸ್ ಕನಸು ಭಗ್ನವಾಯಿತು. 57 ಕೆಜಿ ವಿಭಾಗದಲ್ಲಿ ಸೆಮಿಫೈನಲ್ನಲ್ಲಿ 19 ವರ್ಷದ ಅನ್ಶು ಮಲಿಕ್ 57 ಕೆಜಿ ವಿಭಾಗದಲ್ಲಿ ಉಜ್ಬೆಕಿಸ್ತಾನದ ಅಖ್ಮೆಂಡೋವಾರ ವಿರುದ್ಧ ಪ್ರಾಬಲ್ಯ ಸಾಧಿಸಿ 12-2 ಗೆಲ್ಲು ಮೂಲಕ ಟೋಕಿಯೋ ಟಿಕೆಟ್ ಗಿಟ್ಟಿಸಿಕೊಂಡರು.