ಕರ್ನಾಟಕ

karnataka

By

Published : Mar 10, 2020, 2:03 PM IST

Updated : Mar 10, 2020, 11:54 PM IST

ETV Bharat / sports

ಟೊಕಿಯೋ ಓಲಂಪಿಕ್​ಗೆ​ ಟಿಕೆಟ್​ ಗಿಟ್ಟಿಸಿಕೊಂಡ ಸಿಮ್ರಾಂಜಿತ್​ ಕೌರ್​

ಭಾರತೀಯ ಬಾಕ್ಸರ್ ಸಿಮ್ರಾಂಜಿತ್ ಕೌರ್ (60 ಕೆಜಿ) ಮಂಗೋಲಿಯಾದ ನಮುನ್ ಮೊನ್ಖೋರ್​ ವಿರುದ್ಧ 5-0 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಅವರು ಒಲಿಂಪಿಕ್​ಗೆ ಟಿಕೆಟ್​ ಕನ್ಫರ್ಮ್​ ಮಾಡಿಕೊಂಡಿದ್ದಾರೆ.

Simranjit Kaur becomes eighth Indian boxer to secure Tokyo Olympics berth
ಒಲಿಂಪಿಕ್ಸ್​ ಅರ್ಹತೆ ಪಡೆದ ಬಾಕ್ಸರ್​​ಗಳು

ಅಮ್ಮಾನ್​:ಭಾರತೀಯ ಬಾಕ್ಸರ್ ಸಿಮ್ರಾಂಜಿತ್ ಕೌರ್ (60 ಕೆಜಿ) ಮಂಗೋಲಿಯಾದ ನಮುನ್ ಮೊನ್ಖೋರ್​ ವಿರುದ್ಧ 5-0 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಏಷ್ಯನ್​/ಓಷಿಯನ್​ ಓಲಂಪಿಕ್​ನ ಕ್ವಾಲಿಫೈಯರ್​ಗೆ ಪ್ರವೇಶಿಸಿದ್ದಾರೆ.

ಅಷ್ಟೇ ಅಲ್ಲದೆ, ಮೊನ್ಖೋರ್ ವಿರುದ್ಧ ಈ ಗೆಲುವು ದಾಖಲಿಸುತ್ತಿದ್ದಂತೆ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 8ನೇ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಸಿಮ್ರಾಂಜಿತ್ ಕೌರ್. ಸಿಮ್ರಾಂಜಿತ್ ಮುಂದಿನ ಸೆಮಿಫೈನಲ್‌ನಲ್ಲಿ ಚೀನಾದ ತೈಪೆಯ ಶಿಹ್-ಯಿ ವು ಅವರನ್ನು ಎದುರಿಸಲಿದ್ದಾರೆ.

ಅರ್ಹತೆ ಪಡೆದ ಬಾಕ್ಸರ್​​ಗಳು

ಅರ್ಹತೆ ಪಡೆದವರು: ಅಮಿತ್​ ಪಂಗಲ್​, ಪೂಜಾ ರಾಣಿ, ಲೋವ್ಲಿನಾ ಬೊರ್ಗೊಹೈನ್, ವಿಕಾಸ್ ಕ್ರಿಶನ್, ಸತೀಶ್​ ಕುಮಾರ್​, ಮೇರಿ ಕೋಮ್ ಮತ್ತು ಆಶಿಶ್ ಕುಮಾರ್ ಈಗಾಗಲೇ ಟೋಕಿಯೊ ಒಲಂಪಿಕ್​​ಗೆ​ ಅರ್ಹತೆ ಪಡೆದವರು.

ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಮನೀಶ್ ಕೌಶಿಕ್ (63 ಕೆಜಿ) ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ಚಿಂಜೋರಿಗ್ ಬತಾರ್‌ಸುಖ್‌ ವಿರುದ್ಧ 2-3 ಅಂತರದಲ್ಲಿ ಅಘಾತ ಅನುಭವಿಸಿದ್ದಾರೆ. ಆದರೂ ಅವರು ಓಲಂಪಿಕ್​ಗೆ ಅರ್ಹತೆ ಪಡೆಯುವ ಕನಸು ನನಸು ಮಾಡಿಕೊಳ್ಳಲು ಇನ್ನೂ ಅವಕಾಶ ಇದೆ.

63 ಕೆಜಿ ವಿಭಾಗದಲ್ಲಿ ಕ್ವಾಟರ್​​ ಫೈನಲ್​ ಸೋತ 6 ಬಾಕ್ಸರ್​​ಗಳು ಮತ್ತೊಮ್ಮೆ ಸೆಣಸಾಡಲಿದ್ದಾರೆ. ಇಲ್ಲಿ ಗೆದ್ದವರು ಓಲಂಪಿಕ್​ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಇಲ್ಲಿ ಮನೀಷ್​​ ಆಸ್ಟ್ರೇಲಿಯಾದ ಹ್ಯಾರಿಸನ್​​ ಗಾರ್​ಸೈಡ್​ ಅವರನ್ನು ಎದುರಿಸಲಿದ್ದಾರೆ. ಕ್ವಾಟರ್​​ ಫೈನಲ್​ ಸೋತ 81 ಕೆಜಿ ವಿಭಾಗದಲ್ಲಿ ಸಚಿನ್​ ಕುಮಾರ್​ ಕೂಡ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Last Updated : Mar 10, 2020, 11:54 PM IST

ABOUT THE AUTHOR

...view details