ದುಬೈ: ಭಾರತದ ಜೂನಿಯರ್ ಬಾಕ್ಸರ್ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಮತ್ತು ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ 8 ಚಿನ್ನ ಸಹಿತ ಒಟ್ಟು ದಾಖಲೆಯ 21 ಪದಗಳನ್ನು ಪಡೆದಿದ್ದಾರೆ.
ಭಾನುವಾರ ನಡೆದ ಫೈನಲ್ಸ್ನಲ್ಲಿ ಭಾರತದ 13 ಜೂನಿಯರ್( ಬಾಲಕ ಮತ್ತು ಬಾಲಕಿ) ಬಾಕ್ಸರ್ಗಳು ಕಾದಾಡಿದ್ದರು. ಇದರಲ್ಲಿ 8 ಮಂದಿ ಚಿನ್ನ ಗೆದ್ದರೆ, ಐವರು ಬಾಕ್ಸರ್ಗಳು ಬೆಳ್ಳಿ ಗೆದ್ದರು. ಇದಕ್ಕೂ ಮೊದಲೇ 6 ಬಾಕ್ಸರ್ಗಳು ಸೆಮಿಫೈನಲ್ನಲ್ಲಿ ಸೋತು ಕಂಚು ಪಡೆದರು.
ಬಾಲಕರ ಫೈನಲ್ಸ್ನಲ್ಲಿ ಒಟ್ಟು 3 ಮಂದಿ ಸ್ಪರ್ಧಿಸಿದರೆ 10 ಬಾಲಕಿಯರು ಫೈನಲ್ನಲ್ಲಿ ಕಾದಾಡಿದ್ದರು. ಬಾಲಕರ ವಿಭಾಗದಲ್ಲಿ ರೋಹಿತ್ ಚಮೋಲಿ(48 ಕೆಜಿ), ಭರತ್ ಜೂನ್(81+ಕೆಜಿ) ಚಿನ್ನ ಗೆದ್ದರೆ, ಗೌರವ್ ಸೈನಿ(70ಕೆಜಿ) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಜೂನಿಯರ್ ಬಾಲಕಿಯರ ವಿಭಾಗದಲ್ಲಿ ವಿಶು ರಥಿ(48ಕೆಜಿ), ತನು(52ಕೆಜಿ), ನಿಕಿತಾ ಚಾಂದ್(60ಕೆಜಿ),ಮಹಿ ರಾಘವ್(63ಕೆಜಿ), ಪ್ರಂಜಾಲ್ ಯಾದವ್(75ಕೆಜಿ) ಮತ್ತು ಕೀರ್ತಿ(81+ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಸಂಜನಾ(81ಕೆಜಿ) ರುದ್ರಿಕಾ(70 ಕೆಜಿ) ಮುಸ್ಕಾನ್(46ಕೆಜಿ) ಮತ್ತು ಆಂಚಲ್ ಸೈನಿ(57ಕೆಜಿ) ಫೈನಲ್ನಲ್ಲಿ ಸೋಲು ಕಂಡು ಬೆಳ್ಳಿಗೆ ಕೊರೊಳೊಡ್ಡಿದರು.
ಒಟ್ಟಾರೆ ಭಾರತ ಬಾಲಕರ ವಿಭಾಗದಲ್ಲಿ 2 ಚಿನ್ನ, 1 ಬೆಳ್ಳಿ ಮತ್ತು 3 ಕಂಚು ಗೆದ್ದರೆ, ಬಾಲಕಿಯರ ವಿಭಾಗದಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಗೆದ್ದರು. ಒಟ್ಟು 19 ಪದಕ ತಮ್ಮದಾಗಿಸಿಕೊಂಡರು. 63 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಮಹಿ ರಾಘವ್ ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಬಾಕ್ಸರ್ ಗೌರವಕ್ಕೆ ಪಾತ್ರರಾದರು.
ಇದನ್ನು ಓದಿ:ಪ್ಯಾರಾಲಿಂಪಿಕ್ಸ್ ಭಾರತಕ್ಕೆ 2ನೇ ಚಿನ್ನ : F64 ಜಾವಲಿನ್ ಥೋನಲ್ಲಿ ಬಂಗಾರ ಗೆದ್ದ ಸುಮಿತ್ ಆಂಟಿಲ್