ಕರ್ನಾಟಕ

karnataka

ETV Bharat / sports

ಸ್ಕ್ವಾಷ್ ಪುರುಷರ ಸಿಂಗಲ್ಸ್​ನಲ್ಲಿ ಸೌರವ್​​ಗೆ ಬೆಳ್ಳಿ, ಕುಸ್ತಿಯಲ್ಲಿ ಅಂತಿಮ್ ಪಂಘಾಲ್​ಗೆ ಕಂಚು - ಅಂತಿಮ್ ಪಂಘಾಲ್

ಸ್ಕ್ವಾಷ್ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಭಾರತಕ್ಕೆ ಚಿನ್ನ ಬಂದರೆ, 53 ಕೆ.ಜಿ ಫ್ರೀಸ್ಟೈಲ್​ ಕುಸ್ತಿಯಲ್ಲಿ ಕಂಚು ಒಲಿಯಿತು.

ಸೌರವ್​​ಗೆ ಬೆಳ್ಳಿ
ಸೌರವ್​​ಗೆ ಬೆಳ್ಳಿ

By ETV Bharat Karnataka Team

Published : Oct 5, 2023, 5:29 PM IST

Updated : Oct 5, 2023, 5:54 PM IST

ಹ್ಯಾಂಗ್‌ಝೌ:ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಸ್ಕ್ವಾಷ್ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಮಲೇಷ್ಯಾದ ಈನ್ ಯೋವ್ ಎನ್‌ಜಿ ವಿರುದ್ಧ ಭಾರತದ ಸೌರವ್ ಘೋಸಲ್ 1-2 ಅಂಕಗಳಿಂದ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಇನ್ನೊಂದೆಡೆ, 53 ಕೆಜಿ ಫ್ರೀಸ್ಟೈಲ್​ ವಿಭಾಗದ ಕುಸ್ತಿಯಲ್ಲಿ ಅಂತಿಮ್ ಪಂಘಾಲ್​ ಕಂಚಿನ ಪದಕ ತಮ್ಮದಾಗಿಸಿಕೊಂಡರು. 86 ಪದಕಗಳನ್ನು ಗೆಲ್ಲುವ ಮೂಲಕ ಭಾರತ 100 ರ ಗಡಿಯತ್ತ ಮುನ್ನುಗ್ಗುತ್ತಿದೆ.

ಸ್ಕ್ವಾಷ್​ನಲ್ಲಿ ಕೈ ತಪ್ಪಿದ ಚಿನ್ನ:ಗುರುವಾರ ಇಲ್ಲಿ ನಡೆದ ಸ್ಕ್ವಾಷ್ ಪುರುಷರ ಸಿಂಗಲ್ಸ್​ನಲ್ಲಿ ಸೌರವ್ ಘೋಸಲ್​ ಚಿನ್ನದ ನಿರೀಕ್ಷೆ ಮೂಡಿಸಿದ್ದರು. ಆದರೆ, ಮಲೇಷ್ಯಾದ ಈನ್ ಯೋವ್ ಎನ್‌ಜಿ ವಿ ವಿರುದ್ಧದ ಸೆಣಸಾಟದಲ್ಲಿ ಸೋಲು ಕಂಡರು. ಮೊದಲ ಸೆಟ್‌ನ ಆರಂಭದಲ್ಲಿ 1-6 ರಿಂದ ಹಿನ್ನಡೆ ಅನುಭವಿಸಿದ ಸೌರವ್​, ಬಳಿಕ ಪುಟಿದೆದ್ದು 9-11 ರಲ್ಲಿ ಮೊದಲ ಸೆಟ್​ ಗೆದ್ದರು.

1-0 ಮುನ್ನಡೆ ಸಾಧಿಸಿದ ಸೌರವ್​ ಎರಡನೇ ಸೆಟ್​ನಲ್ಲಿ ಮಲೇಷ್ಯಾದ ಆಟಗಾರನ ಆಕ್ರಮಣಕಾರಿ ಆಟದ ಮುಂದೆ 11-9 ಅಂಕಗಳಿಂದ ಸೋತರು. ಮೂರನೇ ಸೆಟ್​ನಲ್ಲೂ ಭರ್ಜರಿ ಆಟವಾಡಿದ ಮಲೇಷ್ಯಾದ ಈನ್ ಯೋವ್ ಎನ್‌ಜಿ 11-5 ರಿಂದ ಗೆದ್ದು ಪಂದ್ಯವನ್ನು ವಶಪಡಿಸಿಕೊಂಡರು. ಕೊನೆಯ ಎರಡು ಸೆಟ್‌ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಭಾರತೀಯ ಆಟಗಾರನನ್ನು ಕಾಡಿದ ಮಲೇಷ್ಯಾ ಸ್ಕ್ಯಾಷರ್​ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಮೊದಲ ಏಷ್ಯನ್​ ಕುಸ್ತಿಯಲ್ಲಿ ಅಂತಿಮ್​ಗೆ ಕಂಚು:ವಿಶ್ವ ಕುಸ್ತಿಯಲ್ಲಿ ಕಂಚಿನ ಪದಕ ವಿಜೇತೆ, 19 ವರ್ಷದ ಅಂತಿಮ್​ ಪಂಘಾಲ್​ ತಮ್ಮ ಮೊದಲ ಏಷ್ಯನ್​ ಗೇಮ್ಸ್​ ಕೂಟದ 53 ಕೆಜಿ ಫ್ರೀಸ್ಟೈಲ್​ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಸಾಧನೆ ಮಾಡಿದರು. ಮಂಗೋಲಿಯಾದ ಬ್ಯಾಟ್ ಒಚಿರಿನ್ ಬೊಲೊರ್ಟುಯಾ ವಿರುದ್ಧ 3-0 ಅಂತರದಲ್ಲಿ ಎತ್ತಿ ಕೆಡವಿದ ಪೈಲ್ವಾನ್​ ಕಂಚಿಗೆ ಕೊರಳೊಡ್ಡಿದರು.

ಚುರುಕಿನ ಚಲನೆಗಳಿಂದ ಪಂಘಾಲ್ ಎದುರಾಳಿಯ ಮೇಲೆ ಸತತ ದಾಳಿ ನಡೆಸಿದರು. ಕಾಲುಗಳನ್ನೇ ಗುರಿಯಾಗಿಸಿಕೊಂಡಿದ್ದರಿಂದ ಬೊಲೊರ್ಟುಯಾ ಸುಸ್ತಾದರು. ಇದರಿಂದ ಮಂಗೋಲಿಯನ್ ಪೈಲ್ವಾನ್​ ಒಂದು ಋಣಾತ್ಮಕ ಅಂಕ ಪಡೆದರು. ಇದರಿಂದ ಅಂತಿಮ್​ 1-0 ಮುನ್ನಡೆ ಪಡೆದರು. ಬಳಿಕವೇ ಚಾಣಾಕ್ಷ ಪಟ್ಟಿನಿಂದ ಎದುರಾಳಿಯನ್ನು ಚಿತ್​ ಮಾಡಿದ ಅಂತಿಮ್​ ಮತ್ತೊಂದು ಗಳಿಸಿದರು. ಮೊದಲ ಸುತ್ತಿನ ಅಂತ್ಯಕ್ಕೆ 3-0ಯಲ್ಲಿ ಮುಂದಿದ್ದರು.

86ಕ್ಕೇರಿದ ಪದಕಗಳ ಸಂಖ್ಯೆ: ಎರಡನೇ ಸುತ್ತಿನಲ್ಲಿ ಭಾರತೀಯ ಪೈಲ್ವಾನ್​ ತಪ್ಪಿನಿಂದಾಗಿ ಒಂದು ಅಂಕ ಕಳೆದುಕೊಂಡರು. ಎದುರಾಲಿಗೆ ಬಿಟ್ಟುಕೊಟ್ಟ ಏಕೈಕ ಪಾಯಿಂಟ್ ಇದಾಗಿತ್ತು. ನಂತರ ಅಂತಿಮ್​ ಮತ್ತೊಂದು ಅಂಕ ಪಡೆದರು. ಕೊನೆಯಲ್ಲಿ ಇಬ್ಬರೂ ಸಮಾನವಾಗಿ ಕಾದಾಡಿದ್ದರಿಂದ ಯಾರಿಗೂ ಅಂಕ ಸಿಗಲಿಲ್ಲ. ಈ ಗೆಲುವಿನೊಂದಿಗೆ ಅಂತಿಮ್​ 2024 ರ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದರು. ಇತ್ತ ಭಾರತದ ಪದಕಗಳ ಸಂಖ್ಯೆಯೂ 86 ಕ್ಕೆ ಹಿಗ್ಗಿತು.

ಇದನ್ನೂ ಓದಿ:ಹಾಕಿ ಸೆಮಿಫೈನಲ್‌: ಚೀನಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ 0-4 ರಿಂದ ಸೋಲು; ಕಂಚಿಗಾಗಿ ಹೋರಾಟ

Last Updated : Oct 5, 2023, 5:54 PM IST

ABOUT THE AUTHOR

...view details