ಹ್ಯಾಂಗ್‌ಝೌ (ಚೀನಾ):ಏಷ್ಯನ್ ಗೇಮ್ಸ್‌ನಲ್ಲಿ, ಭಾರತದ ಆರ್ಚರಿ ಮಹಿಳಾ ತಂಡವು ಚೈನೀಸ್ ತೈಪೆ (ತೈವಾನ್) ತಂಡವನ್ನು ಫೈನಲ್‌ನಲ್ಲಿ ಮಣಿಸಿ ಚಿನ್ನ ಪದಕಕ್ಕೆ ಮುತ್ತಿಟ್ಟಿದೆ. ಹಾಲಿ ವಿಶ್ವ ಚಾಂಪಿಯನ್ ಆಗಿರುವ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದರು.
ಜ್ಯೋತಿ, ಅದಿತಿ ಮತ್ತು ಪರ್ನೀತ್ ಒಟ್ಟಾಗಿ 230 ಅಂಕಗಳನ್ನು ಗಳಿಸಿದರೆ, ಅವರ ಎದುರಾಳಿಗಳು ಕೊನೆಯ ಅಂತ್ಯಕ್ಕೆ 229 ಅಂಕಗಳನ್ನು ಗಳಿಸಿದರು. ಭಾರತವು ತೈವಾನ್ ವಿರುದ್ಧ ಆರಂಭದಿಂದಲೂ ಮುನ್ನಡೆ ಸಾಧಿಸಿದರು. ಕೊನೆಯ ಹಂತದ ವರೆಗೂ ತನ್ನ ಅಗ್ರಸ್ಥಾನ ಕಾಯ್ದುಕೊಂಡಿತು. ಭಾರತವು ತೈವಾನ್ ವಿರುದ್ಧ ಒಂದು ಅಂಕದಿಂದ ಜಯ ಗಳಿಸಿತು. ಇದಕ್ಕೂ ಮೊದಲು, ಗುರುವಾರ ಇಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಆರ್ಚರಿಯಲ್ಲಿ ಐದನೇ ಪದಕವನ್ನು ಖಚಿತಪಡಿಸಿಕೊಳ್ಳಲು ಭಾರತದ ತಂಡವು ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾ ತಂಡವನ್ನು ಹೊರಹಾಕಿತು.
ಮೊದಲ ಸೆಟ್‌ನಲ್ಲಿ ಚೈನೀಸ್ ತೈಪೆ ಎದುರಾಳಿಗಳು ಕಠಿಣ ಹೋರಾಟ ನೀಡಿದರು. ಆ ಸೆಟ್ ಅನ್ನು 54-56 ಅಂಕಗಳಿಂದ ಗೆದ್ದರು, ಆದರೆ ನಂತರ ಭಾರತ ತಂಡ ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿ ಎರಡನೇ ಚಿನ್ನಕ್ಕೆ ಕೊರಳೊಡ್ಡಿತು.
ಎಸ್ಎಐ ಅಭಿನಂದನೆ: ಆರ್ಚರಿ ತಂಡ ಚಿನ್ನದ ಪದಕ ಪಡೆದುಕೊಂಡಿರುವುದರಿಂದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಎಸ್ಎಐ ಅಭಿನಂದಿಸಿದೆ. ಈ ಸಂಬಂಧ ಅದು ಟ್ವೀಟ್ ಮಾಡಿದೆ. "ಗೋಲ್ಡನ್ ಗರ್ಲ್ಸ್ #ಖೇಲೋಇಂಡಿಯಾ ಅಥ್ಲೀಟ್‌ಗಳಾದ ಅದಿತಿ, @ವಿಜೆಸುರೇಖಾ ಮತ್ತು @ಪರ್ನೀಟ್ಟ್ ಅವರು ಚೈನೀಸ್ ತೈಪೆಯನ್ನು 230-228 ಅಂಕಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಭಾರತದ ಪದಕ ಪಟ್ಟಿಗೆ ಮತ್ತೊಂದು ಚಿನ್ನ ಸೇರಿದೆ #AsianGames2022 ಎಲ್ಲರಿಗೂ ಅಭಿನಂದನೆಗಳು" ಎಂದು ಟ್ವೀಟ್ನಲ್ಲಿ ಸಂತಸ ವ್ಯಕ್ತಪಡಿಸಿದೆ.