ಕರ್ನಾಟಕ

karnataka

ETV Bharat / sports

ಬ್ರಿಡ್ಜ್ ಪುರುಷರ ತಂಡಕ್ಕೆ ಬೆಳ್ಳಿ: ಕುಸ್ತಿಯಲ್ಲಿ ಕಿರಣ್ ಬಿಷ್ಣೋಯ್, ಅಮನ್ ಸೆಹ್ರಾವತ್​ಗೆ ಕಂಚು - Bajrang Punia

ಏಷ್ಯನ್​ ಗೇಮ್ಸ್​ನಲ್ಲಿ ಭಾರತ 22 ಚಿನ್ನ, 34 ಬೆಳ್ಳಿ ಮತ್ತು 39 ಕಂಚಿನಿಂದ 95 ಪದಕಗಳನ್ನು ಗೆದ್ದುಕೊಂಡಿದೆ.

PAK vs NED
PAK vs NED

By ETV Bharat Karnataka Team

Published : Oct 6, 2023, 7:28 PM IST

ಹ್ಯಾಂಗ್​ಝೌ (ಚೀನಾ): 19ನೇ ಏಷ್ಯಾಡ್​​ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು ದಾಖಲೆ ಬರೆಯಲು ಸಜ್ಜಾಗಿದೆ. 100ರ ಐತಿಹಾಸಿಕ ಸಾಧನೆಗೆ ಇನ್ನು ಐದು ಪದಕಗಳು ಬೇಕಿವೆ. ಬ್ರಿಡ್ಜ್​ ಸ್ಪರ್ಧೆಯಲ್ಲಿ ಇಂದು ಭಾರತದ ಆಟಗಾರರ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹಾಂಕಾಂಗ್ ಚೀನಾ ಫೈನಲ್‌ನಲ್ಲಿ 229.1 ಅಂಕ ಗಳಿಸಿದರೆ, ಭಾರತ 152 ಅಂಕ ಗಳಿಸಿತು.

ಜಗ್ಗಿ ಶಿವದಾಸನಿ, ಸಂದೀಪ್ ಥಕ್ರಾಲ್, ರಾಜೇಶ್ವರ್ ತಿವಾರಿ, ಸುಮಿತ್ ಮುಖರ್ಜಿ, ರಾಜು ತೊಲಾನಿ ಮತ್ತು ಅಜಯ್ ಖರೆ ಬ್ರಿಡ್ಜ್​ ತಂಡದಲ್ಲಿದ್ದ ಆಟಗಾರರು. ಜಪಾನ್ ಮತ್ತು ಚೀನಾ ಆಟಗಾರರು ಕಂಚು ಜಯಿಸಿದರು.

ಬ್ರಿಡ್ಜ್ ಕ್ರೀಡೆಯನ್ನು 2018ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಪರಿಚಯಿಸಲಾಯಿತು. ಕಳೆದ ಆವೃತ್ತಿಗಳಲ್ಲಿ ಭಾರತೀಯ ಪುರುಷರ ಜೋಡಿ ಚಿನ್ನ ಗೆದ್ದಿತ್ತು. ಪುರುಷ ಮತ್ತು ಮಿಶ್ರ ತಂಡಗಳು ಕಂಚಿನ ಪದಕ ಗೆದ್ದಿದ್ದವು. ಈ ಬಾರಿ ಪುರುಷರ ಬ್ರಿಡ್ಜ್ ತಂಡ ಬೆಳ್ಳಿ ಗೆದ್ದರೆ, ಮಿಶ್ರ ಮತ್ತು ಮಹಿಳಾ ತಂಡಗಳು ಪ್ರಾಥಮಿಕ ಸುತ್ತಿನಲ್ಲೇ ಹೊರಬಿದ್ದವು.

ಕುಸ್ತಿಯಲ್ಲಿ ಮತ್ತೆರಡು ಕಂಚು: ಕಿರಣ್ ಬಿಷ್ಣೋಯ್, ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾದರೆ, 2018ರ ಚಾಂಪಿಯನ್​ ಬಜರಂಗ್ ಪುನಿಯಾ ಯಾವುದೇ ಪದಕ ಗೆಲ್ಲುವಲ್ಲಿ ವಿಫಲರಾದರು. ಕಾಮನ್‌ವೆಲ್ತ್ ಗೇಮ್ಸ್ ಕಂಚ ವಿಜೇತೆ ಕಿರಣ್ ಬಿಷ್ಣೋಯ್ ಮಂಗೋಲಿಯಾದ ಅರಿಯುಂಜರ್ಗಲ್ ಗನ್ಬತ್ ವಿರುದ್ಧ 6-3 ಅಂತರದ ಜಯ ಸಾಧಿಸಿ ಮಹಿಳೆಯರ ಫ್ರೀಸ್ಟೈಲ್ 76 ಕೆ.ಜಿ ವಿಭಾದಲ್ಲಿ ಕಂಚಿಗೆ ತೃಪ್ತಿಪಟ್ಟರು.

ಪುರುಷರ ಫ್ರೀಸ್ಟೈಲ್ (57 ಕೆ.ಜಿ) ಕಂಚಿನ ಪದಕ ಪಂದ್ಯದಲ್ಲಿ ಅಮನ್ ಸೆಹ್ರಾವತ್ 11-0 ರಿಂದ ಚೀನಾದ ಲಿಯು ಮಿಂಗು ಅವರನ್ನು ಸೋಲಿಸಿದರು. 20 ವರ್ಷದ ಭಾರತೀಯ ಕುಸ್ತಿಪಟು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.

ಟೋಕಿಯೊ 2020ರ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಪದಕ ಗೆಲ್ಲಲು ವಿಫಲರಾದರು. 29 ವರ್ಷದ ಭಾರತೀಯ ಗ್ರಾಪ್ಲರ್ ಕಂಚಿನ ಪದಕದ ಪಂದ್ಯದಲ್ಲಿ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಜಪಾನ್‌ನ ಕೈಕಿ ಯಮಗುಚಿ ವಿರುದ್ಧ 10-0 ಅಂತರದಿಂದ ಸೋತರು. ಬಜರಂಗ್ ಪುನಿಯಾ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 68 ಕೆ.ಜಿ ಚಾಂಪಿಯನ್ ಆಗಿದ್ದರು. 2014ರ ಆವೃತ್ತಿಯಲ್ಲಿ 61 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಇದನ್ನೂ ಓದಿ:World Cup 2023: ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಪಾಕ್​; ​ನೆದರ್ಲೆಂಡ್ಸ್ ಗೆಲುವಿಗೆ ಬೇಕು 287 ರನ್

ABOUT THE AUTHOR

...view details