ಹಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನ ಮೂರನೇ ದಿನವಾದ ಇಂದು ಭಾರತದ ಆಟಗಾರರು ಹಲವು ಕ್ರೀಡೆಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಇಂದಿನ ಭಾರತದ ಸ್ಪರ್ಧೆಗಳು ಭಾಗಿಯಾಗುವ ವಿವಿಧ ಆಟಗಳು ಮತ್ತು ವೇಳಾಪಟ್ಟಿ ಇಂತಿದೆ.
ಭಾರತ ಇದುವರೆಗೆ 11 ಪದಕಗಳನ್ನು ಗೆದ್ದುಕೊಂಡಿದೆ. ಮೊದಲ ದಿನ ಐದು ಹಾಗೂ ಎರಡನೇ ದಿನ ಆರು ಪದಕಗಳನ್ನು ಸಾಧಿಸಿದೆ. ನಿನ್ನೆ (ಸೋಮವಾರ) ಚಿನ್ನದ ಖಾತೆ ತೆರೆದಿತ್ತು. ಶೂಟಿಂಗ್ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಚಿನ್ನ ಒಲಿದು ಬಂದಿದೆ. ಮೂರನೇ ದಿನ ಅಂದರೆ ಇಂದು ಮತ್ತೆ ಭಾರತೀಯ ಆಟಗಾರರು ಪದಕ ಬೇಟೆ ಮುಂದುವರೆಸಲಿದ್ದಾರೆ.
ಬಾಕ್ಸಿಂಗ್: ಸಚಿನ್ ಸಿವಾಚ್ ವಿರುದ್ಧ ಉದಿನ್ ಅಸ್ರಿ - ಪುರುಷರ ವಿಭಾಗ 51-57 ಕೆ.ಜಿ (ಮಧ್ಯಾಹ್ನ 12:30ಕ್ಕೆ)
ನರಿಂದರ್ ಬರ್ವಾಲ್ ವಿರುದ್ಧ ಎಲ್ಚೊರೊ ಉಲು ಒಮಾಟ್ಬೆಕ್ - ಪುರುಷರ ವಿಭಾಗ +92 ಕೆ.ಜಿ (ಸಂಜೆ 6:15ಕ್ಕೆ)
ಚೆಸ್: (ಮಧ್ಯಾಹ್ನ 12:30ಕ್ಕೆ) ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ಅರ್ಜುನ್ ಅರಿಗಸಿ ಮತ್ತು ವಿದಿತ್ ಗುಜರಾತಿ (ಪುರುಷರು ಮತ್ತು ಮಹಿಳೆಯರ ವೈಯಕ್ತಿಕ ಈವೆಂಟ್) ಐದನೇ ಮತ್ತು ಆರನೇ ಸುತ್ತಿನ ಪಂದ್ಯಗಳು.
ಕುದುರೆ ಸವಾರಿ:(ಬೆಳಗ್ಗೆ 5:30ಕ್ಕೆ) ಹೃದಯ್ ಛೇಡಾ, ಅನುಷ್ ಅಗರ್ವಾಲ್, ದಿವ್ಯಕೃತಿ ಸಿಂಗ್, ಸುದೀಪ್ತಿ ಹಜೇಲಾ (ಡ್ರೆಸ್ಜ್ ವೈಯಕ್ತಿಕ ಮತ್ತು ಟೀಂ ಈವೆಂಟ್).
ಇಸ್ಪೋರ್ಟ್ಸ್: ಸ್ಟ್ರೀಟ್ ಫೈಟರ್ ವಿ: (ಬೆಳಗ್ಗೆ 7:20ಕ್ಕೆ) ಪ್ರಜಾಪತಿ ಮಯಾಂಕ್ ವಿರುದ್ಧ ರಾಜಿಖಾನ್ ತಲಾಲ್ ಫುಡ್ ಮತ್ತು ಬಿಸ್ವಾಸ್ ಅಯಾನ್ ವಿರುದ್ಧ ನ್ಗುಯೆನ್ ಖಾನ್ ಹಂಗ್ ಚೌ ಪಂದ್ಯಗಳು.
ಫೆನ್ಸಿಂಗ್: (ಬೆಳಗ್ಗೆ 6:30ಕ್ಕೆ) ಮಹಿಳೆಯರ ಸೇಬರ್ ವೈಯಕ್ತಿಕ ಸುತ್ತಿನ ಪೂಲ್ 4ರಲ್ಲಿ ಭವಾನಿ ದೇವಿ ಸೆಣಸಾಟ. (ಪ್ರದರ್ಶನದ ಮೇಲೆ ಮುಂದಿನ ಸುತ್ತುಗಳು ಸಾಗುತ್ತವೆ.)
ಹಾಕಿ: (ಬೆಳಗ್ಗೆ 6:30ಕ್ಕೆ) ಭಾರತ vs ಸಿಂಗಾಪುರ (ಪುರುಷರು) - ಗುಂಪು ಹಂತ
ಸೈಲಿಂಗ್: (ಬೆಳಗ್ಗೆ 8:30ಕ್ಕೆ) ಪುರುಷರ ವಿಂಡ್‌ಸರ್ಫಿಂಗ್ - iQFoil ರೇಸ್ 15, 16,17, 18, 19- ಜೆರೋಮ್ ಕುಮಾರ್ ಸವಾರಿಮುತ್ತು.
ಮಿಕ್ಸೆಡ್ Multihull - Nacra 17 ರೇಸ್ 13,14 (ಪದಕ ಸ್ಪರ್ಧೆ)- ಸಿದ್ದೇಶ್ವರ್ ಇಂದರ್ ಡೊಯಿಫೋಡ್ ಮತ್ತು ರಮ್ಯಾ ಸರವಣನ್
ಮಿಕ್ಸೆಡ್ Dinghy - 470 ಓಟ 11, 12 (ಪದಕ ಸ್ಪರ್ಧೆ)- ಸುಧಾಂಶು ಶೇಖರ್ ಮತ್ತು ಪ್ರೀತಿ ಕೊಂಗರ
ಮಹಿಳೆಯರ Dinghy - ILCA4 ರೇಸ್ 11 (ಪದಕ ಸ್ಪರ್ಧೆ)- ನೇಹಾ ಠಾಕೂರ್
ಬೆಳಗ್ಗೆ 8:40ರ ನಂತರ: ಪುರುಷರ Dinghy - ILCA4 ರೇಸ್ 11-ಅಧ್ವೈತ್ ಮೆನನ್
ಬೆಳಗ್ಗೆ 11:30ರ ನಂತರ:ಮಹಿಳೆಯರ Single Dinghy Race 10, 11 - ILCA6- ನೇತ್ರಾ ಕುಮನನ್
ಮಹಿಳೆಯರ Skiff - 49erFX ರೇಸ್ 13, 14 (ಪದಕ ಸ್ಪರ್ಧೆ)- ಹರ್ಷಿತಾ ತೋಮರ್ ಮತ್ತು ಶೀತಲ್ ವರ್ಮಾ