ಕರ್ನಾಟಕ

karnataka

ETV Bharat / sports

ಏಷ್ಯನ್ ಗೇಮ್ಸ್​ 2023: ಅರ್ಚರಿ ಮಹಿಳಾ ರಿಕರ್ವ್ ವಿಭಾಗದಲ್ಲಿ ಭಾರತಕ್ಕೆ ಕಂಚು... 87ಕ್ಕೆ ಏರಿಕೆ ಆದ ಪದಕಗಳ ಸಂಖ್ಯೆ

Asian Games 2023: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಪದಕಗಳ ಬೇಟೆ ಮುಂದುವರಿಸಿದೆ. ಇಂದು (ಶುಕ್ರವಾರ) ಭಾರತದ ಅರ್ಚರಿ ಮಹಿಳಾ ರಿಕರ್ವ್ ತಂಡವು ವಿಯೆಟ್ನಾಂ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ.

Etv Bharat
Etv Bharat

By ETV Bharat Karnataka Team

Published : Oct 6, 2023, 10:02 AM IST

ಹ್ಯಾಂಗ್‌ಝೌ:ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಅರ್ಚರಿ ಮಹಿಳಾ ರಿಕರ್ವ್ ತಂಡವು ವಿಯೆಟ್ನಾಂ ತಂಡವನ್ನು ಮಣಿಸುವ ಮೂಲಕ ಕಂಚಿನ ಪದಕಕ್ಕೆ ಕೊರೊಳಡ್ಡಿದೆ. ಭಾರತದ ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಅವರು ಒಳ್ಳೆಯ ಪ್ರದರ್ಶನ ನೀಡಿದ್ದಾರೆ.

ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತೀಯ ಆಟಗಾರರು ಹಿಂದಿನ ಏಷ್ಯನ್ ಗೇಮ್ಸ್‌ನ ದಾಖಲೆಯನ್ನು ಮುರಿದಿದ್ದಾರೆ. ಈ ಸಲ ಭಾರತ ಏಷ್ಯನ್ ಗೇಮ್ಸ್‌ನಲ್ಲಿ 21 ಚಿನ್ನ, 32 ಬೆಳ್ಳಿ ಮತ್ತು 34 ಕಂಚು ಸೇರಿದಂತೆ ಇದುವರೆಗೂ 87 ಪದಕಗಳನ್ನು ಗೆದ್ದಿದೆ. ಏಷ್ಯನ್​ ಗೇಮ್ಸ್​ ಮುಗಿಯಲು ಇನ್ನೂ ಎರಡುದಿನಗಳಷ್ಟೇ ಬಾಕಿ ಇದೆ.

ಈ ಬಾರಿ ಭಾರತ ಹಾಕಿಕೊಂಡಿರುವ ಯೋಜನೆಯಂತೆ ಪದಕಗಳ ಶತಕ ಬಾರಿಸಲು 13 ಪದಕಗಳ ಅವಶ್ಯಕತೆ ಇದ್ದು, ಗುರಿ ಈಡೇರುವ ಸಾಧ್ಯತೆಗಳಿವೆ.

ಇದನ್ನೂ ಓದಿ:Asian Games: ಬಾಂಗ್ಲಾ ಬಗ್ಗುಬಡಿದು ಫೈನಲ್​ಗೆ ಟೀಂ ಇಂಡಿಯಾ ಲಗ್ಗೆ.. ಭಾರತಕ್ಕೆ ಮತ್ತೊಂದು ಪದಕ ಖಚಿತ

ABOUT THE AUTHOR

...view details