ಕರ್ನಾಟಕ

karnataka

ETV Bharat / sports

ಏಷ್ಯನ್‌ ಗೇಮ್ಸ್‌: 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತಕ್ಕೆ ದಾಖಲೆಯ ಚಿನ್ನ! - ಭಾರತಕ್ಕೆ ಚಿನ್ನ ಗೆದ್ದಿದ್ದಾರೆ

Asian Games 2023: ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ.

India bags first gold  first gold in this edition of Asian Games  Asian Games  Asian Games 2023  ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಶೂಟರ್​ಗಳು  ನ್ಯಾಶನಲ್​ ರೆಕಾರ್ಡ್​ ಧೂಳಿಪಟ  ಭಾರತ 19ನೇ ಏಷ್ಯನ್​ ಗೇಮ್ಸ್​ನ ಮೊದಲ ಚಿನ್ನ  ಕಂಚಿನ ಪದಕ  ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ  ಭಾರತಕ್ಕೆ ಚಿನ್ನ ಗೆದ್ದಿದ್ದಾರೆ  ಪುರುಷರ 10 ಮೀಟರ್ ಏರ್ ರೈಫಲ್‌ನ ವಿಶ್ವದಾಖಲೆ
ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಶೂಟರ್​ಗಳು! ನ್ಯಾಶನಲ್​ ರೆಕಾರ್ಡ್​ ಧೂಳಿಪಟ!

By ETV Bharat Karnataka Team

Published : Sep 25, 2023, 8:41 AM IST

Updated : Sep 25, 2023, 8:56 AM IST

ಹ್ಯಾಂಗ್‌ಝೌ (ಚೀನಾ):ಭಾರತದಪುರುಷರ 10 ಮೀಟರ್ ಏರ್ ರೈಫಲ್ ತಂಡವು ವಿಶ್ವದಾಖಲೆಯೊಂದಿಗೆ ಪ್ರಸ್ತುತ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಚಿನ್ನ ಸಂಪಾದಿಸಿತು. ರುದ್ರಾಂಕ್ಷ್ ಪಾಟೀಲ್, ಐಶ್ವರಿ ತೋಮರ್ ಮತ್ತು ದಿವ್ಯಾಂಶ್ ಪನ್ವಾರ್ ಚಿನ್ನಕ್ಕೆ ಗುರಿಯಿಟ್ಟ ಸ್ಪರ್ಧಿಗಳು. ಈವೆಂಟ್‌ನಲ್ಲಿ ಈ ಮೂವರು 1893.7 ಪಾಯಿಂಟ್‌ ಗಳಿಸಿದರು. ದಕ್ಷಿಣ ಕೊರಿಯಾ ಬೆಳ್ಳಿ ಹಾಗೂ ಚೀನಾ ಕಂಚು ಜಯಿಸಿತು.

ಇದೇ ವೇಳೆ, ಭಾರತ ತಂಡ 10 ಮೀಟರ್ ಏರ್ ರೈಫಲ್‌ನ ವಿಶ್ವದಾಖಲೆ ನಿರ್ಮಿಸಿತು. ಕಳೆದ ತಿಂಗಳು ಚೀನಿ ಸ್ಪರ್ಧಿಗಳ ತಂಡ 1893.3 ಅಂಕ ಗಳಿಸಿತ್ತು. ಇದೀಗ ಭಾರತ 1893.7 ಪಾಯಿಂಟ್‌ ಗಳಿಕೆಯೊಂದಿಗೆ ಈ ದಾಖಲೆ ಅಳಿಸಿ ಹಾಕಿದೆ.

ರೋಯಿಂಗ್‌ನಲ್ಲಿ ಕಂಚು: ರೋಯಿಂಗ್​ನಲ್ಲಿ ಭಾರತಕ್ಕೆ ಇಂದು ಮತ್ತೊಂದು ಪದಕ ಬಂದಿದೆ. ಪುರುಷರ 4ನೇ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ ಕಂಚು ಗೆದ್ದರು.

ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್‌ನಲ್ಲಿ ಭಾರತದ ಬಲರಾಜ್ ಪನ್ವಾರ್ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಈ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು. ಚೀನಾದ ಲಿಯಾಂಗ್ ಚಿನ್ನ ಗೆದ್ದರೆ, ಜಪಾನ್‌ನ ರ್ಯುಟಾ ಅವರು ಬೆಳ್ಳಿ ಮತ್ತು ಹಾಂಕಾಂಗ್‌ನ ಚುನ್ ಮೂರನೇ ಸ್ಥಾನ ಪಡೆದರು.

ರಿಲೆಯಲ್ಲಿ ಫೈನಲ್​ ತಲುಪಿದ ವನಿತೆಯರು:ಮಹಿಳೆಯರ 4x100 ಮೀ. ಫ್ರೀಸ್ಟೈಲ್ ರಿಲೇ ಹೀಟ್ 2 ರಲ್ಲಿ 3:53.80 ರ ನಂತರ ಫೈನಲ್‌ಗೆ ತಲುಪಿತು. 3:53.80 ರ ಅದ್ಭುತ ಸಮಯದೊಂದಿಗೆ ಶಿವಾಂಗಿ ಶರ್ಮಾ, ದಿನಿಧಿ ದೇಸಿಂಗು, ಮಾನ ಪಟೇಲ್ ಮತ್ತು ಜಾನ್ವಿ ಚೌಧರಿ ತಂಡವು ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು.

ಇದನ್ನೂ ಓದಿ:Asian Games 2023: ಚೆಸ್​ನಲ್ಲಿ ಗೆಲುವಿನ ಆರಂಭ ಪಡೆದ ಭಾರತ.. ಈಜಿನಲ್ಲಿ ಶ್ರೀಹರಿ ನಟರಾಜ್​ಗೆ ಕೈತಪ್ಪಿದ ಪದಕ

Last Updated : Sep 25, 2023, 8:56 AM IST

ABOUT THE AUTHOR

...view details