ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹರ್ಮಿಲನ್ ಬೇನ್ಸ್ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಹ್ಯಾಂಗ್‌ಝೌ ಏಷ್ಯಾಡ್ನಲ್ಲಿ ಅವರಿಗೆ ದೊರೆತ ಎರಡನೇ ಬೆಳ್ಳಿ ಇದಾಗಿದೆ. ಆಂಭದಲ್ಲಿ ಹಿಂದೆ ಇದ್ದ ಬೇನ್ಸ್ 400 ಮೀಟರ್ ಓಟದ ನಂತರ ವೇಗವನ್ನು ಹೆಚ್ಚಿಸಿದರು. ಕೊನೆಯಲ್ಲಿ ಚೀನಾದ ವಾಂಗ್ ಚುನ್ಯು ಅವರನ್ನು 2:03.75 ಸಮಯದಲ್ಲಿ ಹಿಂದಿಕ್ಕಿ ಎರಡನೇ ಸ್ಥಾನ ಪಡೆದರು. ಶ್ರೀಲಂಕಾದ ತರುಷಿ 2:03.20 ರಲ್ಲಿ ಚಿನ್ನ ಗೆದ್ದರು.
ಬೇನ್ಸ್ 1500 ಮೀಟರ್ ಓಟದಲ್ಲಿ 4:12.74 ಸೆಕೆಂಡ್‌ಗಳಲ್ಲಿ ಬೆಳ್ಳಿ ಗೆದ್ದಿದ್ದರು. ಹರ್ಮಿಲನ್ ಕುಟುಂಬಕ್ಕೆ ಅಥ್ಲೆಟಿಕ್ಸ್ ಹಿನ್ನೆಲೆ ಇದೆ. ಬೇನ್ಸ್ ತಂದೆ ಅಮನದೀಪ್ ಬೈನ್ಸ್ 1500 ಮೀ. ಓಟದಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದಾರೆ ಮತ್ತು ತಾಯಿ ಮಾಧುರಿ ಸಕ್ಸೇನಾ 2002 ರ ಏಷ್ಯನ್ ಗೇಮ್ಸ್ನಲ್ಲಿ 800 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಅವಿನಾಶ್ ಸೇಬಲ್ ಎರಡನೇ ಪದಕ: ಅವಿನಾಶ್ ಸೇಬಲ್ ಪುರುಷರ 5000 ಮೀಟರ್ ಓಟದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. 2023ರ ಏಷ್ಯಾಡ್ನಲ್ಲಿ ಅವಿನಾಶ್ಗೆ ಇದು ಎರಡನೇ ಪದಕವಾಗಿದೆ. ಅವಿನಾಶ್ ಸೇಬಲ್ ಪುರುಷರ 5000 ಮೀಟರ್ ಬೆಳ್ಳಿ ಪದಕವನ್ನು 13: 21.09 ರಲ್ಲಿ ಗಳಿಸಿದರು. ಭಾರತೀಯ ಗುಲ್ವೀರ್ ಸಿಂಗ್ 13:29.93 ಸಮಯದೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಬಿರ್ಹಾನು ಬಾಲೆವ್ ಯೆಮಾತಾವ್ ಏಷ್ಯನ್ ಗೇಮ್ಸ್‌ನ ದಾಖಲೆಯ ಸಮಯದೊಂದಿಗೆ 13:17.40 ನೊಂದಿಗೆ ಚಿನ್ನ ಗೆದ್ದರೆ, ದಾವಿತ್ ಫಿಕಾಡು 13:25.63 ರೊಂದಿಗೆ ಕಂಚಿಗೆ ತೃಪ್ತಿಪಟ್ಟರು.