ಹಾಂಗ್‌ಝೌ (ಚೀನಾ): ಚೀನಾದ ಹ್ಯಾಂಗ್‌ಝೌ ನಗರದಲ್ಲಿ ಏಷ್ಯನ್ ಗೇಮ್ಸ್ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 11 ಪದಕಗಳನ್ನು ಗೆದ್ದುಕೊಂಡಿದೆ. ಮೂರನೇ ದಿನವಾದ ಇಂದು ವಿವಿಧ ಸ್ಪರ್ಧೆಗಳಲ್ಲಿ ದೇಶದ ಸ್ಪರ್ಧಿಗಳು ಪದಕ ಗೆಲ್ಲುವ ನಿರೀಕ್ಷೆ ಇದೆ.
ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡವು ಇಂದು ಸಿಂಗಾಪುರವನ್ನು ಮಣಿಸಿತು. ಬಾಕ್ಸಿಂಗ್‌ನಲ್ಲಿ ಸಚಿನ್ ಸಿವಾಚ್ 57 ಕೆ.ಜಿ ವಿಭಾಗದಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ಭವಾನಿ ದೇವಿ ಫೆನ್ಸಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ವಾರ್ಟರ್ ಫೈನಲ್ನಲ್ಲಿ ನಿರಾಸೆ ಮೂಡಿಸಿದರು. ಸ್ಕ್ವಾಷ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದೆ.
ಶೂಟಿಂಗ್ 25 ಮೀಟರ್:25 ಮೀ ಪಿಸ್ತೂಲ್ ಮಹಿಳಾ ಅರ್ಹತಾ ನಿಖರ ಹಂತದ ನಂತರ ಮನು ಭಾಕರ್ 294 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇಶಾ ಸಿಂಗ್ 292 ಮತ್ತು ರಿದಮ್ ಸಾಂಗ್ವಾನ್ 290 ರೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ. ಅಗ್ರ ಎಂಟು ಮಂದಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಹಾಕಿಯಲ್ಲಿ ಜಯಭೇರಿ:ಹಾಕಿಯಲ್ಲಿ ಭಾರತ ತಂಡಸಿಂಗಾಪುರ ವಿರುದ್ಧ 16-1 ಗೋಲುಗಳೊಂದಿಗೆ ಅಮೋಘ ಜಯಭೇರಿ ಬಾರಿಸಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು. 16-0 ಅಂತರದ ಭರ್ಜರಿ ಜಯ ದಾಖಲಿಸಿದ ಭಾರತ ತಂಡ ಇಂದು ಸಿಂಗಾಪುರ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡಿದೆ.