ಹ್ಯಾಂಗ್‌ಝೌ (ಚೀನಾ):ಇಲ್ಲಿನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಆರಂಭದಿಂದಲೂ ಭಾರತದ ಶೂಟರ್ಗಳು ಪದಕಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಕ್ರೀಡಾಕೂಟದ 8ನೇ ದಿನವಾದ ಇಂದು (ಭಾನುವಾರ) ಶೂಟಿಂಗ್‌ನಲ್ಲಿ ದೇಶಕ್ಕೆ ಮೂರು ಪದಕಗಳು ಸಿಕ್ಕಿವೆ.
ಪುರುಷರ ಟ್ರ್ಯಾಪ್ ವೈಯಕ್ತಿಕ ಫೈನಲ್‌ನಲ್ಲಿ ಡೇರಿಯಸ್ ಕಿನಾನ್ ಚೆನೈ ಕಂಚು ಗೆದ್ದರು. ಇದಕ್ಕೂ ಮುನ್ನ, ಮಹಿಳಾ ಟ್ರ್ಯಾಪ್ ಶೂಟಿಂಗ್‌ನಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಬೆಳ್ಳಿ, ಪುರುಷರ ಟ್ರ್ಯಾಪ್ ಶೂಟಿಂಗ್‌ನಲ್ಲಿ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನ ಗೆದ್ದರು. ಪುರುಷರ ಟ್ರ್ಯಾಪ್ ವೈಯಕ್ತಿಕ ಫೈನಲ್‌ನಲ್ಲಿ ಕಿನಾನ್ ಚೆನೈ 32 ಅಂಕಗಳೊಂದಿಗೆ ಕಂಚು ವಶಪಡಿಸಿಕೊಂಡರು. 46 ಅಂಕಗಳೊಂದಿಗೆ ಚೀನಾದ ಯಿಂಗ್ ಕಿ ಚಿನ್ನ ಗೆದ್ದರೆ, 45 ಅಂಕಗಳೊಂದಿಗೆ ಕುವೈತ್‌ನ ತಲತ್ ಅಲ್ರಾಶಿದಿ ಬೆಳ್ಳಿ ಪಡೆದರು.
ಈ ಮೂಲಕ ಭಾರತ ಶೂಟಿಂಗ್‌ನಲ್ಲಿ ಈವರೆಗೆ ಒಟ್ಟು 22 ಪದಕ ಸಾಧನೆ ಮಾಡಿತು. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 6 ಕಂಚು ಸೇರಿದೆ. ಮನೀಶಾ ಕೀರ್ ಮಹಿಳೆಯರ ಟ್ರ್ಯಾಪ್ ಫೈನಲ್‌ನಲ್ಲಿ 16 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದಿದ್ದು, ಪದಕ ಪಡೆಯಲು ವಿಫಲರಾದರು.
ಬಾಕ್ಸಿಂಗ್ನಲ್ಲಿ ಪದಕ ನಿರೀಕ್ಷೆ: ಮಹಿಳೆಯರ 57 ಕೆಜಿ ಕ್ವಾರ್ಟರ್-ಫೈನಲ್‌ನಲ್ಲಿ ಬಾಕ್ಸರ್ ಪರ್ವೀನ್ ಹೂಡಾ 5.0 ಪಾಯಿಂಟ್‌ಗಳಲ್ಲಿ ಉಜ್ಬೇಕಿಸ್ತಾನ್‌ನ ಸಿಟೋರಾ ತುರ್ಡಿಬೆಕೋವಾ ಅವರನ್ನು ಸೋಲಿಸಿದರು. ಈ ಗೆಲುವಿನ ಮೂಲಕ ಪರ್ವೀನ್ ಪದಕವನ್ನು ಖಚಿತಪಡಿಸಿಕೊಂಡರು. ಇದೇ ವೇಳೆ, 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ 50 ಕೆಜಿ ವಿಭಾಗದ ಪ್ರವೇಶ ಪಡೆದುಕೊಂಡರು. ಏಷ್ಯಾಡ್ನಲ್ಲಿ ನಡೆಯುವ ಬಾಕ್ಸಿಂಗ್ಸ್ ಅನ್ನು 2024ರ ಒಲಂಪಿಕ್ಸ್ನ ಆಯ್ಕೆಯ ಸುತ್ತಾಗಿ ಪರಿಗಣಿಸಲಾಗಿದೆ. ಹೀಗಾಗಿ ರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ನಿಯೋಗ ಏಷ್ಯಾಡ್ನ್ನು ಪ್ರತಿನಿಧಿಸಿದೆ. 9ನೇ ಏಷ್ಯನ್ ಗೇಮ್ಸ್‌ನಲ್ಲಿ ನಿಖತ್ ಜರೀನ್ (ಮಹಿಳೆಯರ 50 ಕೆಜಿ), ಪ್ರೀತಿ ಪವಾರ್ (ಮಹಿಳೆಯರ 54 ಕೆಜಿ), ಲೊವ್ಲಿನಾ ಬೊರ್ಗೊಹೈನ್ (ಮಹಿಳೆಯರ 75 ಕೆಜಿ) ಮತ್ತು ನರೇಂದರ್ ಬರ್ವಾಲ್ (ಪುರುಷರ +92 ಕೆಜಿ) ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.
ಸ್ಕ್ವಾಷ್ ಮಿಶ್ರ ಡಬಲ್ಸ್ನಲ್ಲಿ ಶುಭಾರಂಭ: ನಿನ್ನೆ (ಶನಿವಾರ) ಸ್ಕ್ವಾಷ್ ಗೇಮ್ನಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಇಂದು ಮಿಶ್ರ ಡಬಲ್ಸ್ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಜೋಡಿ ಪೂಲ್ ಎ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂದು ನಡೆದ ಮೊದಲ ಪಂದ್ಯದಲ್ಲಿ ರಿಪಬ್ಲಿಕ್ ಆಫ್ ಕೊರಿಯಾ ತಂಡವನ್ನು ಮಣಿಸಿದರೆ ನಂತರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 11-4, 11-1ರಿಂದ ಗೆಲುವು ದಾಖಲಿಸಿದರು. ಮುಂದಿನ ಪಂದ್ಯ ಅಕ್ಟೋಬರ್ 3ರಂದು ಮಂಗಳವಾರ ಜಪಾನ್‌ನ ಜಪಾನ್‌ನ ರಿಸಾ ಸುಗಿಮೊಟೊ ಮತ್ತು ಟೊಮೊಟಾಕಾ ಎಂಡೊ ವಿರುದ್ಧ ಭಾರತೀಯ ಕಾಲಮಾನ 8 ಗಂಟೆಗೆ ನಡೆಯಲಿದೆ.
ಭಾರತ ಒಟ್ಟಾರೆ ಈವರೆಗೆ 42 ಪದಕಗಳೊಂದಿಗೆ 4ನೇ ಸ್ಥಾನದಲ್ಲಿದೆ. 11 ಚಿನ್ನ, 16 ಬೆಳ್ಳಿ ಮತ್ತು 15 ಕಂಚಿನ ಪದಕಗಳನ್ನು ಅಥ್ಲಿಟ್ಗಳು ಜಯಿಸಿದ್ದಾರೆ.
ಇದನ್ನೂ ಓದಿ:ಟ್ರಾಪ್ ಶೂಟಿಂಗ್ ಪುರುಷರ ವಿಭಾಗದಲ್ಲಿ ಭಾರತಕ್ಕೆ ಚಿನ್ನ.. ಮಹಿಳಾ ವಿಭಾಗಕ್ಕೆ ಬೆಳ್ಳಿ