ಕರ್ನಾಟಕ

karnataka

ETV Bharat / sports

ಏಷ್ಯನ್ ಟೇಬಲ್​ ಟೆನ್ನಿಸ್ ಚಾಂಪಿಯನ್​ಶಿಪ್ : ಎರಡು ಕಂಚಿನ ಪದಕ ಗೆದ್ದ ಭಾರತದ ಜೋಡಿಗಳು - ಶರತ್ ಕಮಲ್​- ಸತಿಯಾನ್ ಜೋಡಿಗೆ ಕಂಚು

8ನೇ ಶ್ರೇಯಾಂಕದ ಹರ್ಮೀತ್​ ಮತ್ತು ಮನವ್​ ದಕ್ಷಿಣ ಕೋರಿಯಾದ 5ನೇ ಶ್ರೇಯಾಂಕದ ವೂಜಿನ್ ಜಂಗ್ ಮತ್ತು ಜಾಂಗ್​ಹೂನ್​ ಲಿಮ್ ವಿರುದ್ಧ 4-11, 6-22, 12-10, 11-9,8-118ರಲ್ಲಿ ಮೊದಲ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಕಂಚಿಗೆ ತೃಪ್ತಿ ಪಟ್ಟುಕೊಂಡರು..

Asian C'ships
ಏಷ್ಯನ್ ಟೇಬಲ್​ ಟೆನ್ನಿಸ್ ಚಾಂಪಿಯನ್​ಶಿಪ್

By

Published : Oct 4, 2021, 5:16 PM IST

ನವದೆಹಲಿ: ಭಾರತದ ಶರತ್ ಕಮಲ್ ಮತ್ತು ಜಿ ಸತಿಯಾನ್ ಹಾಗೂ ಹರ್ಮೀತ್ ದೇಸಾಯಿ ಮತ್ತು ಮನವ್​ ತಕ್ಕರ್​ ಜೋಡಿ 2021ರ ಐಟಿಟಿಎಫ್​-ಎಟಿಟಿಯು ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

8ನೇ ಶ್ರೇಯಾಂಕದ ಹರ್ಮೀತ್​ ಮತ್ತು ಮನವ್​ ದಕ್ಷಿಣ ಕೋರಿಯಾದ 5ನೇ ಶ್ರೇಯಾಂಕದ ವೂಜಿನ್ ಜಂಗ್ ಮತ್ತು ಜಾಂಗ್​ಹೂನ್​ ಲಿಮ್ ವಿರುದ್ಧ 4-11, 6-22, 12-10, 11-9,8-118ರಲ್ಲಿ ಮೊದಲ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಕಂಚಿಗೆ ತೃಪ್ತಿ ಪಟ್ಟುಕೊಂಡರು.

ಮತ್ತೊಂದು ಡಬಲ್ಸ್​ ಸೆಮಿಫೈನಲ್ಸ್​ನಲ್ಲಿ 6ನೇ ಶ್ರೇಯಾಂಕದ ಶರತ್​ ಮತ್ತು ಸತಿಯಾನ್ 0-3ರಲ್ಲಿ ವಿಶ್ವದ 14ನೇ ಶ್ರೇಯಾಂಕದ ಜಪಾನ್​ನ ಯುಕಿಯಾ ಉಡ ಮತ್ತು ಶನ್ಸುಕೆ ತೊಗಾಮಿ ವಿರುದ್ಧ ಸೋಲು ಕಂಡರು. ಭಾರತೀಯ ಜೋಡಿ 5-11, 9-11, 11-13 ಗೇಮ್​ಗಳ ಅಂತರದಲ್ಲಿ ಜಪಾನ್ ಜೋಡಿಗೆ ಮಣಿದು ಕಂಚಿನ ಪದಕ ಪಡೆದರು.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧ2-1ರಲ್ಲಿ ಸರಣಿ ಗೆದ್ದಿದ್ದೇವೆ ಎನ್ನುವುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ

ABOUT THE AUTHOR

...view details