ನವದೆಹಲಿ: ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಬಾಕ್ಸರ್ಗಳಾದ ಮಿನಾಕ್ಷಿ ಮತ್ತು ಪ್ರೀತಿ ಸೆಮಿಫೈನಲ್ ಪ್ರವೇಶಿಸಿದ್ದು, ಎರಡು ಬೆಳ್ಳಿ ಪದಕಗಳನ್ನು ಖಚಿತ ಪಡಿಸಿದ್ದಾರೆ.
ಮಹಿಳೆಯರ 52 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಮಿನಾಕ್ಷಿ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕು ಬಾರಿ ಆಗ್ನೇಯ ಏಷ್ಯನ್ ಗೇಮ್ಸ್ ಪದಕ ವಿಜೇತೆ ಫಿಲಿಪ್ಪೀನ್ಸ್‌ನ ಐರಿಶ್ ಮ್ಯಾಗ್ನೊ ಅವರನ್ನು 4-1ರಿಂದ ಸೋಲಿಸಿದರು. ಇತ್ತ, ಪ್ರೀತಿ ಕೂಡ 57 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನ್‌ನ ತುರ್ಡಿಬೆಕೋವಾ ಸಿಟೋರಾ ವಿರುದ್ಧ 5-0ರಿಂದ ಗೆದ್ದು, ಸೆಮಿಫೈನಲ್ಗೆ ಲಗ್ಗೆ ಇಟ್ಟರು.