ದುಬೈ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ 7 ಬಾಕ್ಸರ್ಗಳು ಫೈನಲ್ ಪ್ರವೇಶಿಸಿದ್ದಾರೆ. ಇಂದು 4 ಮಹಿಳಾ ಬಾಕ್ಸರ್ಗಳು ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.
6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್(51ಕೆಜಿ), ಪೂಜಾರಾಣಿ(75ಕೆಜಿ), ಅನುಪಮ(81+ಕೆಜಿ) ಮತ್ತು ಲಾಲ್ಬೌತ್ಸಾಹಿ(64ಕೆಜಿ) ತಮ್ಮ ತಮ್ಮ ವಿಭಾಗದಲ್ಲಿ ಭಾನುವಾರ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಒಲಿಂಪಿಕ್ ಬೌಂಡ್ ಬಾಕ್ಸರ್ಗಳಾದ ಕೋಮ್ ಕಜಕಸ್ತಾನದ ನಜಿಮ್ ಕಿಜೈಬಿ ವಿರುದ್ಧ ಮತ್ತು ಪೂಜಾ ರಾಣಿ ಉಜ್ಬೇಕಿಸ್ತಾನದ ಮಾವ್ಲುಡಾ ಮೊವ್ಲೋನೋವಾರ ಸವಾಲು ಎದುರಿಸಲಿದ್ದಾರೆ.
ಸೋಮವಾರ ಪುರುಷರ ಫೈನಲ್ ಪಂದ್ಯ ನಡೆಯಲಿದೆ. ಒಲಿಂಪಿಕ್ ಬೌಂಡ್ ಅಮಿತ್ ಪಂಘಲ್, ಶಿವ ಥಾಪ(64ಕೆಜಿ) ಮತ್ತು ಸಂಜೀತ್(91ಕೆಜಿ) ಫೈನಲ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ:IPL ಪುನಾರಾರಂಭ : ಒಂದು ವಾರ ಮುಂಚೆ ಸಿಪಿಎಲ್ ಆರಂಭಿಸಲು ವಿಂಡೀಸ್ ಮಂಡಳಿಗೆ ಬಿಸಿಸಿಐ ಮನವಿ