ದುಬೈ: 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51ಕೆಜಿ) ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕದೊಂದಿಗೆ ಟೂರ್ನಿಗೆ ಗುಡ್ ಬೈ ಹೇಳಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೇರಿ ಕಜಕಸ್ತಾನದ ನಜಿಮ್ ಕಿಜೈಬಿ ವಿರುದ್ಧ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿದರು. ಆದರೆ ಬೆಳ್ಳಿ ಪದಕ ಪಡೆಯುವ ಮೂಲಕ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 7ನೇ ಪದಕ ಪಡೆದರು. 2003ರಲ್ಲಿ ಚಿನ್ನದ ಪದಕ ಪಡೆದಿದ್ದರು.
ಮೊದಲ ಸುತ್ತಿನಲ್ಲಿ ತಮಗಿಂತ 11 ವರ್ಷ ಕಿರಿಯ ಬಾಕ್ಸರ್ ವಿರುದ್ಧ ಮೊನಚು ದಾಳಿಯಿಂದ ಮೊದಲ ಸುತ್ತಿನಲ್ಲಿ ಗೆಲುವು ಪಡೆದು ಮುನ್ನಡೆ ಸಾಧಿಸಿದ ಮೇರಿ 2ನೇ ಸುತ್ತಿನಲ್ಲಿ ಸೋಲು ಕಂಡರು. ನಿರ್ಣಾಯಕ ಕೊನೆಯ ಸುತ್ತಿನಲ್ಲಿ 2-3ರಲ್ಲಿ ರೋಚಕ ಸೆಣಸಾಟ ನಡೆಸಿ ಸೋಲು ಕಂಡರು.