ಕರ್ನಾಟಕ

karnataka

ETV Bharat / sports

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಮೂರು ಚಿನ್ನದ ಪದಕ ತಂದ ಮಹಿಳಾ ಮಣಿಗಳು - ಪರ್ವೀನ್ ಹೂಡಾ

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್​ ಪ್ರವೇಶಿಸಿದ ಭಾರತದ ಐವರು ಮಹಿಳಾ ಬಾಕ್ಸರ್​ಗಳ ಪೈಕಿ ನಾಲ್ವರು ಚಿನ್ನ ಮತ್ತು ಒಬ್ಬರು ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ.

asian-boxing-championship-lovlina-parveen-saweety-and-alifiya-win-gold
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಮೂರು ಚಿನ್ನದ ಪದಕ ತಂದ ಮಹಿಳಾ ಮಣಿಗಳು

By

Published : Nov 11, 2022, 8:27 PM IST

ಅಮಾನ್‌ (ಜೋರ್ಡಾನ್‌):ಜೋರ್ಡಾನ್‌ನ ಅಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆ ಮೂರು ಚಿನ್ನದ ಪದಕಗಳು ಬಂದಿವೆ. ಮಹಿಳಾ ಬಾಕ್ಸರ್​ಗಳಾದ ಲವ್ಲಿನಾ, ಸ್ವೀಟಿ ಹಾಗೂ ಅಲಿಫಿಯಾ ಪಠಾಣ್ ಬಂಗಾರದ ಪದಕಕ್ಕೆ ಗೆದ್ದಿದ್ದಾರೆ.

ಇಂದು ನಡೆದ ಫೈನಲ್‌ ಪಂದ್ಯಗಳಲ್ಲಿ ಭಾರತದ ಮಹಿಳಾ ಬಾಕ್ಸರ್​ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಮುನ್ನ ಮಹಿಳೆಯರ 63 ಕೆಜಿ ವಿಭಾಗದ ಫೈನಲ್‌ನಲ್ಲಿ ಪರ್ವೀನ್ ಹೂಡಾ ಚಿನ್ನದ ಪದಕ ಗೆದ್ದಿದ್ದರು. ಮಹಿಳೆಯರ 52 ಕೆಜಿ ವಿಭಾಗದಲ್ಲಿ ಮೀನಾಕ್ಷಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.

ಈಗ 75 ಕೆಜಿ ವಿಭಾಗದಲ್ಲಿ ಲವ್ಲಿನಾ, 81 ಕೆಜಿ ವಿಭಾಗದಲ್ಲಿ ಸ್ವೀಟಿ ಹಾಗೂ 81 ಕೆಜಿಗೂ ಮೆಲ್ಪಟ್ಟವರ ವಿಭಾಗದಲ್ಲಿ ಅಲಿಫಿಯಾ ಪಠಾಣ್ ಸಹ ಬಂಗಾರದ ಪದಕಕ್ಕೆ ಗೆದ್ದಿದ್ದಾರೆ. ಈ ಮೂಲಕ ಫೈನಲ್​ ಪ್ರವೇಶಿಸಿದ ಐವರು ಮಹಿಳಾ ಬಾಕ್ಸರ್​ಗಳ ಪೈಕಿ ನಾಲ್ವರು ಚಿನ್ನ ಮತ್ತು ಒಬ್ಬರು ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ.

ಒಲಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ತಮ್ಮ 75 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನ್‌ನ ರುಜ್ಮೆಟೋವಾ ಸೊಖಿಬಾ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ನಂತರ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ 25 ವರ್ಷದ ಲವ್ಲಿನಾಗೆ ಈ ಗೆಲುವು ಭಾರಿ ಬೂಸ್ಟರ್ ಸಿಕ್ಕಂತೆ ಆಗಿದೆ.

81 ಕೆಜಿ ವಿಭಾಗದಲ್ಲಿ ಸ್ವೀಟಿ ಕಜಕಿಸ್ತಾನದ ಗುಲ್ಸಯಾ ಯೆರ್ಜಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಬಂಗಾರದ ಪದಕ ಗೆದ್ದರು. 81 ಕೆಜಿಗೂ ಮೆಲ್ಪಟ್ಟವರ ವಿಭಾಗದಲ್ಲಿ ಅಲಿಫಿಯಾ ಪಠಾಣ್ ಸಹ ಅದ್ಭುತ ಪ್ರದರ್ಶನ ನೀಡಿದರು. ಫೈನಲ್​ನಲ್ಲಿ ಜೋರ್ಡಾನ್‌ನ ಇಸ್ಲಾಂ ಹುಸೈಲಿ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕದ ಬೇಟೆಯಾಡಿದರು.

ಇದನ್ನೂ ಓದಿ:ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಮುತ್ತಿಕ್ಕಿದ ಪರ್ವೀನ್, ಬೆಳ್ಳಿಗೆ ಕೊರಳೊಡ್ಡಿದ ಮೀನಾಕ್ಷಿ

ABOUT THE AUTHOR

...view details