ಬ್ಯಾಂಕಾಂಕ್: ಭಾರತದ ಯುವ ಅರ್ಚರಿ ಪಟು ಅತನು ದಾಸ್ ಏಷ್ಯನ್ ಅರ್ಚರಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಪುರುಷರ ರಿಕರ್ವ್ ವಿಭಾಗದಲ್ಲಿ ಅತನುದಾಸ್ ದಕ್ಷಿಣ ಕೊರಿಯಾದ ಜಿನ್ ಹೈಕ್ ವಿರುದ್ಧ 6-5 ಅಂಕಗಳ ಅಂತರದಿಂದ ಗೆದ್ದು ಕಂಚಿನ ಪದಕ ಪಡೆದರು.

ಸೋಮವಾರ ನಡೆದಿದ್ದ ಮಿಶ್ರ ಡಬಲ್ಸ್ನಲ್ಲಿ ಅತನುದಾಸ್ ದೀಪಿಕಾ ಕುಮಾರಿ ಜೊತೆಯಲ್ಲಿ ತಂಡದ ರಿಕರ್ವ್ ವಿಭಾಗದಲ್ಲಿ ಚೀನಾದ ಜೋಡಿಯನ್ನು 6-2 ರಲ್ಲಿ ಮಣಿಸಿ ಕಂಚಿನ ಪದಕ ಪಡೆದಿದ್ದರು.
ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆಣ್ಣಮ್ ಅವರು ಕೊರಿಯಾ ಜೋಡಿ ಎದುರು 159–154ರ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನ ಸ್ಪರ್ಧೆ ಬುಧವಾರ ನಡೆಯಲಿದ್ದು, ಭಾರತದ ಜೋಡಿ ಚೀನಾ ತೈಪೆಯನ್ನು ಎದುರಿಸಲಿದೆ.