ಫುಕೆಟ್(ಥಾಯ್ಲೆಂಡ್):ಇಲ್ಲಿ ನಡೆಯುತ್ತಿರುವ ಆರ್ಚರಿ ಏಷ್ಯಾಕಪ್‌ನ ರಿಕರ್ವ್ ಮಿಶ್ರ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಮಲೇಷಿಯಾದ ಆಟಗಾರರನ್ನು ಸೋಲಿಸಿದ ಭಾರತೀಯ ಬಿಲ್ಲುಗಾರರಾದ ಪಾರ್ಥ್ ಸಾಲುಂಖೆ ಮತ್ತು ರಿಧಿ ಫೋರ್ ಫೈನಲ್ ತಲುಪಿದ್ದಾರೆ. ಈ ಮೂಲಕ ಸ್ಪರ್ಧೆಯಲ್ಲಿ ಕಂಚು ಸೇರಿದಂತೆ 8 ಪದಕಗಳು ಭಾರತದ ಸೇರುವ ನಿರೀಕ್ಷೆ ಇದೆ.
ಭಾರತದ ಅಗ್ರ ಶ್ರೇಯಾಂಕದ ಜೋಡಿಯಾದ ಪಾರ್ಥ್ ಸಾಲುಂಖೆ ಮತ್ತು ರಿಧಿ ಮಲೇಷಿಯಾದ ಜೋಡಿಯ ವಿರುದ್ಧ 6-2 ಅಂತರದಿಂದ ಜಯ ಸಾಧಿಸಿದರು. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಾಂಗ್ಲಾದ ಜೋಡಿಯನ್ನು ಎದುರಿಸಲಿದ್ದಾರೆ.