ಇಂಡೋನೇಷ್ಯಾ: ಏಷ್ಯಾ ಕಪ್ ಹಾಕಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಇಂಡೋನೇಷ್ಯಾ ವಿರುದ್ಧ 16-0 ಅಂತರದಿಂದ ಭರ್ಜರಿ ಗೆಲುವು ದಾಖಲು ಮಾಡಿರುವ ಭಾರತ, ಸೂಪರ್ 4ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನದ ಹೊರತಾಗಿ ಕೊನೆ ಕ್ಷಣದಲ್ಲಿ ಎದುರಾಳಿ ತಂಡ ಪಾಕಿಸ್ತಾನಕ್ಕೆ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದ್ದ ಭಾರತ, ಇಂದಿನ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿತು.
ಏಷ್ಯಾಕಪ್ನಲ್ಲಿ ಜಪಾನ್ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ 5-2 ಅಂತರದಿಂದ ಸೋಲು ಕಂಡಿದ್ದ ಭಾರತ, ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿತ್ತು. ಆದರೆ, ನಾಕೌಟ್ ಹಂತಕ್ಕೆ ತಲುಪಲು ಇಂದಿನ ಪಂದ್ಯದಲ್ಲಿ 15 ಪಾಯಿಂಟ್ಗಳಿಂದ ಗೆಲುವು ಸಾಧಿಸಬೇಕಾಗಿತ್ತು. ಅದ್ಭುತ ಪ್ರದರ್ಶನ ನೀಡಿ, ಮುಂದಿನ ಹಂತಕ್ಕೆ ಲಗ್ಗೆ ಹಾಕಿದೆ. ಮೊದಲ ಪಂದ್ಯಲ್ಲಿ ಪಾಕ್ ವಿರುದ್ಧ 1-1 ಅಂತರದ ಸಮಬಲ ಸಾಧಿಸಿದ್ದ ಭಾರತ, ಜಪಾನ್ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಹೀಗಾಗಿ, ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿತ್ತು.