ಕರ್ನಾಟಕ

karnataka

ETV Bharat / sports

Ashes series: ಇಂಗ್ಲೆಂಡ್​ನ ಗೆಲುವಿನ ಓಟ ವಿಶ್ವ ಟೆಸ್ಟ್​ ಚಾಂಪಿಯನ್ಸ್​​​​​ಗಳ ಮೇಲೂ ಮುಂದುವರೆಯುತ್ತಾ? - ಆಸ್ಟ್ರೇಲಿಯಾ ಬೌಲಿಂಗ್

ಇಂಗ್ಲೆಂಡ್​ ಕ್ರಿಕೆಟ್​ ತಂಡವು ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಕೊನೆ ವರೆಗೆ ಹೋರಾಟ ನಡೆಸಿ 17 ಟೆಸ್ಟ್‌ಗಳಲ್ಲಿ 12 ರಲ್ಲಿ ಗೆದ್ದಿದೆ.

Ashes Test Cricket Series
ಆಶಸ್​ ಟೆಸ್ಟ್ ಕ್ರಿಕೆಟ್ ಸರಣಿ

By

Published : Jun 15, 2023, 6:04 AM IST

ಬರ್ಮಿಂಗ್‌ಹ್ಯಾಮ್ (ಇಂಗ್ಲೆಡ್​) :ಜೂನ್​ 16 ರಿಂದ ಇಡೀ ಕ್ರಿಕೆಟ್​ ಜಗತ್ತೇ ಕಾದು ನೋಡುತ್ತಿರುವ ಆಶಸ್​ ಟೆಸ್ಟ್​ ಸರಣಿ ಆರಂಭವಾಗಲಿದೆ. ಹಾಲಿ ವಿಶ್ವ ಟೆಸ್ಟ್​ ಚಾಂಪಿಯನ್​ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಕ್ರಿಕೆಟ್​ ತಂಡಗಳ ನಡುವಿನ ಈ ಐತಿಹಾಸಿಕ ಸರಣಿಗಾಗಿ ಎರಡು ತಂಡಗಳು ಕೂಡ ಭರ್ಜರಿಯಾಗಿ ಸಿದ್ದತೆ ಮಾಡಿಕೊಂಡಿವೆ. ಅತ್ಯಂತ ಪ್ರಸಿದ್ಧವಾಗಿರುವ ಆಶಸ್​ ಟೆಸ್ಟ್ ಕ್ರಿಕೆಟ್ ಸರಣಿ 1882 ರಲ್ಲಿ ಮೊದಲ ಪಂದ್ಯದಲ್ಲಿ ಆಡಿದ ನಂತರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳು ಟೆಸ್ಟ್​ ಸರಣಿ ನಿಜಕ್ಕೂ ರೋಮಾಂಚಕಾರಿಯಾಗಿದೆ.

ಇಂಗ್ಲೆಂಡ್​ ಕ್ರಿಕೆಟ್​ ತಂಡ ನಾಯಕ ಬೆನ್ ಸ್ಟೋಕ್ಸ್ ಮತ್ತು ಬ್ಯಾಟಿಂಗ್​ ಕೋಚ್ ಬ್ರೆಂಡನ್ ಮೆಕಲಮ್ ಅವರ ಅಡಿ ಇಂಗ್ಲೆಂಡ್ ತನ್ನ ಕೊನೆಯ 17 ಟೆಸ್ಟ್‌ಗಳಲ್ಲಿ 12 ರಲ್ಲಿ ಆಲ್-ಔಟ್ ಮಾಡುವ ಮೂಲಕ ಗೆಲುವಿನ ನಗೆ ಬೀರಿದೆ. ಸೋಲಿನ ಅಪಾಯದ ನಡುವೆಯೂ ಯಾವಾಗಲೂ ಗೆಲುವನ್ನು ಬೆನ್ನಟ್ಟಿ ಮೈದಾನದಲ್ಲಿ ಹೋರಾಟ ನಡೆಸುವ ಇಂಗ್ಲೆಂಡ್ ತಂಡ ಕಳೆದ ವರ್ಷದಿಂದ ಯಾವುದೇ ಟೆಸ್ಟ್​ ಸರಣಿಯನ್ನು ಸೋತಿಲ್ಲ.

ಇಂಗ್ಲೆಂಡಿನ ಆಟಗಾರರು ತ್ವರಿತ ರನ್ ಮತ್ತು ವೇಗವಾಗಿ ವಿಕೆಟ್‌ಗಳನ್ನು ಉರಳಿಸುವ ಆಕ್ರಮಣಕಾರಿ ಆಟದ ಹಂತವನ್ನು ತಲುಪಿದ್ದಾರೆ. ಆದರೇ ಈಗಾಗಲೇ ಭಾನುವಾರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ವಿಶ್ವ ಟೆಸ್ಟ್​ ಚಾಂಪಿಯನ್ ಪಟ್ಟ ಆಲಂಕರಿಸಿದೆ. ಇದಕ್ಕೆ ಪ್ರಮುಖ ಕಾರಣ ಆಸ್ಟ್ರೇಲಿಯಾ ಬೌಲಿಂಗ್​ ವಿಭಾಗ ರನ್​ ಬಿಟ್ಟುಕೊಡದೇ ಆಕ್ರಮಣಕಾರಿ ಬೌಲಿಂಗ್​ ಮಾಡುವ ಮೂಲಕ ಭಾರತವನ್ನು ಕಟ್ಟಿ ಹಾಕಿ ಸೋಲಿಸಿತ್ತು. ಹೀಗಿರುವಾಗ ಇಂಗ್ಲೆಂಡ್​​ ಬ್ಯಾಟರ್​ಗಳು ಯಾವ ರೀತಿ ಆಸ್ಟ್ರೇಲಿಯ ವೇಗಿಗಳನ್ನು ಎದುರಿಸುತ್ತಾರೆ ಎಂಬುದು ನಿಜಕ್ಕೂ ಕ್ರಿಕೆಟ್​ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ :ICC World Cup 2023: ನ್ಯೂಜಿಲೆಂಡ್​ ತಂಡಕ್ಕೆ ಎರಡನೇ ಆಘಾತ.. ವಿಶ್ವಕಪ್​ನಿಂದ ಮೈಕೆಲ್ ಬ್ರೇಸ್‌ವೆಲ್ ಔಟ್​

ಇನ್ನು ಈ ಸರಣಿ ಬಗ್ಗೆ ಟೆಸ್ಟ್​ ಕ್ರಿಕೆಟ್​ನ GOAT ಎಂದೇ ಕರೆಯುವ ಆಸ್ಟ್ರೇಲಿಯಾ ದಿಗ್ಗಜ ಬ್ಯಾಟರ್ ಸ್ಟೀವ್ ಸ್ಮಿತ್ ಮಾತನಾಡಿ, ನಮ್ಮ ಬೌಲರ್‌ಗಳ ವಿರುದ್ಧ ಇಂಗ್ಲೆಂಡ್​ ತಂಡದ ಹೋರಾಟ ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ನನಗೆ ಕುತೂಹಲವಿದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್​ ತಂಡದ ಆಟಗಾರರು ಬೇರೆ ದೇಶ ತಂಡಗಳ ಬೌಲಿಂಗ್​ ದಾಳಿಗಳ ವಿರುದ್ಧ ನಿಸ್ಸಂಶಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಆದರೆ, ಅವರು ಇನ್ನು ನಮ್ಮ ವಿರುದ್ಧ ಆಡಿಲ್ಲ. ಇದು ವೀಕ್ಷಿಸಲು ರೋಮಾಂಚನಕಾರಿಯಾಗಿದೆ. ಕಳೆದ 12 ತಿಂಗಳುಗಳಲ್ಲಿ ಅವರು ಆಡಿದ ರೀತಿ ಮತ್ತು ಅವರು ನಡೆಸುವ ಆಟದ ತಂತ್ರಗಾರಿಕೆಯನ್ನು ನಾನು ಆನಂದಿಸಿದೆ. ಆದರೆ, ಈ ತಂತ್ರಕಾರಿಕೆ ನಮ್ಮ ವಿರುದ್ಧ ಹೇಗೆ ಕಾರ್ಯಕ್ಕೆ ಬರುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ICC Ranking: ರಹಾನೆ, ಶಾರ್ದೂಲ್ ಐಸಿಸಿ ರ್‍ಯಾಂಕಿಂಗ್​ ಏರಿಕೆ; ಆಡದೇ ಇದ್ದರೂ ಅಶ್ವಿನ್‌ಗೆ ಅಗ್ರಸ್ಥಾನ

ABOUT THE AUTHOR

...view details