ಕರ್ನಾಟಕ

karnataka

ETV Bharat / sports

ನಂ.1 ಆಶ್ಲೇ ಬಾರ್ಟಿ ಮುಡಿಗೆ ಆಸ್ಟ್ರೇಲಿಯನ್ ಓಪನ್ ​: ಬರೋಬ್ಬರಿ 44 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯನ್​! - 44 ವರ್ಷಗಳ ಬಳಿಕ ಆಸ್ಟ್ರೇಲಿಯಾಗೆ ಆಸ್ಟ್ರೇಲಿಯನ್ ಓಪನ್​

1980ರಲ್ಲಿ ವೆಂಡಿ ಟರ್ನ್​ಬುಲ್​ ಆಸ್ಟ್ರೇಲಿಯಾ ಪರ ಕೊನೆಯ ಬಾರಿಗೆ ಫೈನಲ್ ತಲುಪಿದರೆ,1978ರಲ್ಲಿ ಕ್ರಿಸ್ ಒನೀಲ್ ಕೊನೆಯ ಬಾರಿ ಮಹಿಳಾ ಸಿಂಗಲ್ಸ್​ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು..

Ash Barty wins drought-breaking Australian title
ನಂ.1 ಆಶ್ಲೇ ಬಾರ್ಟಿ ಮುಡಿಗೆ ಆಸ್ಟ್ರೇಲಿಯನ್ ಓಪನ್

By

Published : Jan 29, 2022, 5:30 PM IST

ವಿಶ್ವದ ನಂಬರ್​ 1 ಟೆನಿಸ್​ ಆಟಗಾರ್ತಿ ಆ್ಯಶ್ಲೇ ಬಾರ್ಟಿ ಶನಿವಾರ ಅಮೆರಿಕಾದ ಡ್ಯಾನಿಯಲ್​ ಕಾಲಿನ್ಸ್​ ಅವರನ್ನು ಮಣಿಸುವ ಮೂಲಕ ಆಸ್ಟ್ರೇಲಿಯನ್​ ಓಪನ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 44 ವರ್ಷಗಳ ನಂತರ ಪ್ರತಿಷ್ಠಿತ ಗ್ರ್ಯಾಂಡ್​ ಸ್ಲಾಮ್ ಗೆದ್ದ ಆಸ್ಟ್ರೇಲಿಯನ್​ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಬಾರ್ಟಿ 6-3, 7-6(2)ರ ನೇರ ಸೆಟ್​ಗಳಲ್ಲಿ ಅಮೆರಿಕಾದ 27ನೇ ಶ್ರೇಯಾಂಕದ ಆಟಗಾರ್ತಿ ವಿರುದ್ಧ ಸುಲಭವಾಗಿ ಗೆದ್ದು 4 ದಶಕಗಳ ಬಳಿಕ ತಮ್ಮ ರಾಷ್ಟ್ರಕ್ಕೆ ಪ್ರಶಸ್ತಿ ತಂದುಕೊಟ್ಟರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

1980ರಲ್ಲಿ ವೆಂಡಿ ಟರ್ನ್​ಬುಲ್​ ಆಸ್ಟ್ರೇಲಿಯಾ ಪರ ಕೊನೆಯ ಬಾರಿಗೆ ಫೈನಲ್ ತಲುಪಿದರೆ,1978ರಲ್ಲಿ ಕ್ರಿಸ್ ಒನೀಲ್ ಕೊನೆಯ ಬಾರಿ ಮಹಿಳಾ ಸಿಂಗಲ್ಸ್​ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು.

25 ವರ್ಷದ ಆಟಗಾರ್ತಿ 2019ರಲ್ಲಿ ಫ್ರೆಂಚ್​ ಓಪನ್​, 2021ರಲ್ಲಿ ವಿಂಬಲ್ಡನ್​ ಓಪನ್​ ಜಯಿಸಿದ್ದರು. ಇದೀಗ ತಮ್ಮ ಖಾತೆಗೆ 3ನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಯನ್ನು ಕೂಡ ಸೇರಿಸಿಕೊಂಡಿದ್ದಾರೆ.

ಇಡೀ ಟೂರ್ನಿಯಲ್ಲಿ ಪ್ರಾಬಲ್ಯ ಪ್ರದರ್ಶನ ತೋರಿರುವ ಬಾರ್ಟಿ 7 ಪಂದ್ಯಗಳಲ್ಲಿ ಒಂದೇ ಒಂದು ಸೆಟ್​ನಲ್ಲಿ ಸೋಲು ಕಂಡಿಲ್ಲ. ಒಟ್ಟು 106 ಗೇಮ್‌ಗಳಲ್ಲಿ ಕೇವಲ 26 ಗೇಮ್​ಗಳನ್ನ ಮಾತ್ರ ಎದುರಾಳಿಗೆ ಬಿಟ್ಟು ಕೊಟ್ಟಿದ್ದಾರೆ.

ಇದನ್ನೂ ಓದಿ:ಏಷ್ಯಾ ಕಪ್​: ಮುಗ್ಗರಿಸಿದ ಚೀನಾ.. ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತದ ವನಿತೆಯರು

ABOUT THE AUTHOR

...view details