ಕರ್ನಾಟಕ

karnataka

ETV Bharat / sports

ಏಷ್ಯನ್ ಯೂತ್​ ಬಾಕ್ಸಿಂಗ್: 15 ಚಿನ್ನ ಸೇರಿ 39 ಪದಕ ಗೆದ್ದ ಭಾರತೀಯ ಬಾಕ್ಸರ್ಸ್​

ಭಾರತದ ಯೂತ್​ ಬಾಕ್ಸಿಂಗ್ ತಂಡ 7 ಚಿನ್ನ, 3 ಬೆಳ್ಳಿ ಮತ್ತು 8 ಕಂಚಿನ ಪದಕಗಳ ಸಹಿತ ಒಟ್ಟು 18 ಪದಕಗಳನ್ನು ಪಡೆದು 3ನೇ ಸ್ಥಾನ ಪಡೆಯಿತು. ಉಜ್ಬೆಕಿಸ್ತಾನ ಮತ್ತು ಕಜಕಸ್ತಾನ ಕ್ರಮವಾಗಿ 23 ಮತ್ತು 22 ಪದಕ ಪಡೆದು ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ASBC Asian Boxing
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ ಚಾಂಪಿಯನ್​ಶಿಪ್​

By

Published : Mar 15, 2022, 6:52 PM IST

ನವದೆಹಲಿ: ಕೊನೆಯ ದಿನ ವಿಶ್ವನಾಥನ್ ಸುರೇಶ್​ ಮತ್ತು ವನ್ಷಜ್​ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತವು ಜೋರ್ಡಾನ್​ನಲ್ಲಿ ಎಎಸ್​ಬಿಸಿ ಏಷ್ಯನ್ ಯೂತ್​ ಅಂಡ್ ಜೂನಿಯರ್ ಬಾಕ್ಸಿಂಗ್​ ಚಾಂಪಿಯನ್​ಶಿಪ್​​ನಲ್ಲಿ 39 ಪದಕಗಳನ್ನು ಗೆದ್ದು ತವರಿಗೆ ಹಿಂತಿರುಗಿದೆ.

ಸೋಮವಾರ ರಾತ್ರಿ ನಡೆದ 48 ಕೆಜಿ ವಿಭಾಗದ ಫೈನಲ್​ನಲ್ಲಿ ಕಿರ್ಗಿಸ್ತಾನದ ಎರ್ಗೆಷೊವ್​ ಬೆಕ್ಜಾತ್​ ವಿರುದ್ಧ ವಿಶ್ವನಾಥ್​ ಜಯ ಸಾಧಿಸಿದರೆ, ವನ್ಷಜ್​ 63 ಕೆಜಿ ವಿಭಾಗದಲ್ಲಿ ಉಜ್ಬೆಕಿಸ್ತಾನದ ಜವೋಖಿರ್​ ವಿರುದ್ಧ 4-1ರ ಅಂತರದಲ್ಲಿ ಜಯ ಸಾಧಿಸಿದರು. ಇವರಿಬ್ಬರು ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

+92 ಕೆಜಿ ವಿಭಾಗದಲ್ಲಿ ಅಮನ್​ ಸಿಂಗ್ ಫೈನಲ್​ನಲ್ಲಿ ಸೋಲು 1-4ರಿಂದ ಸ್ಥಳೀಯ ಬಾಕ್ಸರ್​ ಸೈಫ್ ಅಲ್-ರವಾಶ್ದಾ ವಿರುದ್ಧ ಸೋಲು ಕಂಡು ಬೆಳ್ಳಿ ಪದಕ ಪಡೆದರು, ಇವರೂ ಕೂಡ ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಪಡೆದಿದ್ದರು.

ಭಾರತದ ಯೂತ್​ ಬಾಕ್ಸಿಂಗ್ ತಂಡ 7 ಚಿನ್ನ, 3 ಬೆಳ್ಳಿ ಮತ್ತು 8 ಕಂಚಿನ ಪದಕಗಳ ಸಹಿತ ಒಟ್ಟು 18 ಪದಕಗಳನ್ನು ಪಡೆದು 3ನೇ ಸ್ಥಾನ ಪಡೆಯಿತು. ಉಜ್ಬೆಕಿಸ್ತಾನ ಮತ್ತು ಕಜಕಸ್ತಾನ ಕ್ರಮವಾಗಿ 23 ಮತ್ತು 22 ಪದಕ ಪಡೆದು ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಜೂನಿಯರ್ ವಿಭಾಗದಲ್ಲಿ ಭಾರತೀಯ ಬಾಕ್ಸರ್​ಗಳು 8 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನ ಪದಕಗಳ ಸಹಿತ 21 ಪದಕಗಳನ್ನು ಗೆದ್ದರು. ಕಳೆದ ದುಬೈ ಆವೃತ್ತಿಯಲ್ಲಿ ಭಾರತ ಜೂನಿಯರ್​ ಮತ್ತು ಯೂತ್ ವಿಭಾಗ ಸೇರಿ 39 ಪದಕಗಳನ್ನೇ ಪಡೆದಿತ್ತು. ಆದರೆ ಈ ಬಾರಿ 14ರ ಬದಲು 15 ಚಿನ್ನದ ಪದಕವನ್ನು ಪಡೆದುಕೊಂಡಿದೆ.

ಇದನ್ನೂ ಓದಿ:ರಿಷಭ್ ಪಂತ್ ಟೆಸ್ಟ್​ ಕ್ರಿಕೆಟ್​​ನಲ್ಲಿ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ವಿಕೆಟ್ ಕೀಪರ್

ABOUT THE AUTHOR

...view details