ನವದೆಹಲಿ: ರಾಷ್ಟ್ರೀಯ ತರಬೆತಿ ಶಿಬಿರಕ್ಕಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಸೋನೆಪತ್ ಕೇಂದ್ರಕ್ಕೆ ಆಗಮಿಸಿದ ಭಾರತೀಯ ಕುಸ್ತಿಪಟು ರಾಹುಲ್ ಅವಾರೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಎಸ್‌ಎಐ ತಿಳಿಸಿದೆ.
ಭಾರತದ ಅತ್ಯುನ್ನತ ಕ್ರೀಡಾ ಗೌರವ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಅವಾರೆ, ಕಳೆದ ವರ್ಷ ಕಜಕಿಸ್ತಾನದ ನೂರ್ಸುಲ್ತಾನ್ನಲ್ಲಿ ನಡೆದ ಕುಸ್ತಿ ವಿಶ್ವಚಾಂಪಿಯನ್ಶಿಪ್ನಲ್ಲಿ 61 ಕೆಜಿ ತೂಕ ವಿಭಾಗದಲ್ಲಿ ಕಂಚು ಗೆದ್ದಿದ್ದರು.
"ಪ್ರೋಟೋಕಾಲ್ಗಳ ಪ್ರಕಾರ ಅವಾರೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎಐ ಎಂಪನೇಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ತರಬೇತಿ ಶಿಬಿರಕ್ಕೆ ಬಂದಾಗಿನಿಂದ ಕ್ವಾರಂಟೈನ್ನಲ್ಲಿ ಇದ್ದರು, ಬೇರೆ ಯಾವುದೇ ಕ್ರೀಡಾಪಟು ಅಥವಾ ಸಿಬ್ಬಂದಿಯೊಂದಿಗೆ ಸಂಪರ್ಕಕ್ಕೆ ಬಂದಿರಲಿಲ್ಲ" ಎಂದು ಎಸ್‌ಎಐ ತಿಳಿಸಿದೆ
ಇದಕ್ಕೂ ಮೊದಲು, ಸೋನೆಪತ್‌ನ ರಾಷ್ಟ್ರೀಯ ಶಿಬಿರಕ್ಕೆ ಆಗಮಿಸಿದ ನಂತರ ಕುಸ್ತಿಪಟು ದೀಪಕ್ ಪುನಿಯಾ ಅವರಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ಅವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ವೈದ್ಯರು ಸಲಹೆ ನೀಡಿದ್ದರು ಎಂದು ಎಸ್‌ಎಐ ತಿಳಿಸಿದೆ.