ಕರ್ನಾಟಕ

karnataka

ETV Bharat / sports

ಶೂಟೌಟ್​ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್​ಗೆ.. ನೆದರ್​ಲ್ಯಾಂಡ್ಸ್​ ಕನಸು ಭಗ್ನ

ಎರಡನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನೆದರ್​ಲ್ಯಾಂಡ್ಸ್​ ಸವಾಲನ್ನು ಮೀರಿದ ಅರ್ಜೆಂಟೀನಾ ಶೂಟೌಟ್​​ನಲ್ಲಿ 4-3 ಗೋಲುಗಳಿಂದ ಗೆದ್ದು ಎರಡನೇ ತಂಡವಾಗಿ ಸೆಮಿಫೈನಲ್​ ತಲುಪಿತು.

By

Published : Dec 10, 2022, 7:35 AM IST

argentina-enter-the-semifinal
ಶೂಟೌಟ್​ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್​ಗೆ

ಲುಸೈಲ್(ಕತಾರ್):ಮೊದಲ ಕ್ವಾರ್ಟರ್​ಫೈನಲ್​ ಪಂದ್ಯದ ಪೆನಾಲ್ಟಿ ಶೂಟೌಟ್​ನಲ್ಲಿ ಬಲಾಢ್ಯ ಬ್ರೆಜಿಲ್​ ತಂಡವನ್ನು ಸೋಲಿಸಿ ರನ್ನರ್​ ಅಪ್​ ಕ್ರೊಯೇಷಿಯಾ ಸೆಮೀಸ್​ಗೆ ತಲುಪಿದರೆ, ಎರಡನೇ ಕ್ವಾರ್ಟರ್​ನಲ್ಲಿ ಶೂಟೌಟ್​ನಲ್ಲಿ ಡಚ್ಚರನ್ನು 4-3 ಗೋಲುಗಳಿಂದ ಸದೆಬಡಿದ ವಿಶ್ವಶ್ರೇಷ್ಠ ಲಿಯೋನೆಲ್​ ಮೆಸ್ಸಿಯ ಅರ್ಜೆಂಟೀನಾ ಎರಡನೇ ತಂಡವಾಗಿ ಸೆಮಿಫೈನಲ್​ಗೆ ಎಂಟ್ರಿ ನೀಡಿತು.

ನಿಗದಿತ 90 ನಿಮಿಷದಲ್ಲಿ 2-2 ಗೋಲುಗಳಿಂದ ಪಂಡ್ಯ ಡ್ರಾ ಆಯಿತು. ಫಲಿತಾಂಶಕ್ಕಾಗಿ ಹೆಚ್ಚುವರಿ 30 ನಿಮಿಷಗಳ ಆಟದಲ್ಲೂ ಯಾವುದೇ ತಂಡ ಗೋಲು ಗಳಿಸಲಿಲ್ಲ. ಇದರಿಂದ ಪೆನಾಲ್ಟಿ ಶೂಟೌಟ್​ ನಡೆಸಲಾಯಿತು. ಪ್ರಾಬಲ್ಯ ಮೆರೆದ ಅರ್ಜೆಂಟೀನಾ ನೆದರ್​ಲ್ಯಾಂಡ್ಸ್​ ವಿರುದ್ಧ ಜಯ ಸಾಧಿಸಿತು.

5ನೇ ಮತ್ತು ಕೊನೆಯ ವಿಶ್ವಕಪ್​ ಆಡುತ್ತಿರುವ ಲಿಯೋನೆಲ್​ ಮೆಸ್ಸಿ ತಮ್ಮ ಕಾಲ್ಚಳಕದಿಂದ 35 ನೇ ನಿಮಿಷದಲ್ಲಿ ಡಚ್ಚರ ಕಣ್ತಪ್ಪಿಸಿ ಚೆಂಡನ್ನು ನಹುಯೆಲ್​ ಮೊಲಿನಾಗೆ ಪಾಸ್​ ನೀಡಿದರು. ಸಿಕ್ಕ ಅವಕಾಶವನ್ನು ಕ್ಷಣದಲ್ಲೇ ಬಳಸಿಕೊಂಡ ಮೊಲಿನಾ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ನೀಡಿದರು. ಬಳಿಕ ಹಲವು ಪ್ರಯತ್ನಗಳ ಹೊರತಾಗಿಯೂ ಪ್ರಥಮಾರ್ಧದಲ್ಲಿ ನೆದರ್​ಲ್ಯಾಂಡ್ಸ್​ ಗೋಲು ಗಳಿಸಲಿಲ್ಲ.

ದ್ವಿತೀಯಾರ್ಧದ 71 ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್​ ಅವಕಾಶವನ್ನು ಗೋಲಾಗಿ ಮಾಡಿದ ಮೆಸ್ಸಿ ತಂಡಕ್ಕೆ 2-0 ಮುನ್ನಡೆಯ ಜೊತೆಗೆ ಈ ಸಲದ ವಿಶ್ವಕಪ್​ನಲ್ಲಿ 4ನೇ ಗೋಲು ಬಾರಿಸಿದರು. ಅಲ್ಲದೇ ವಿಶ್ವಕಪ್​ನ 10ನೇ ಗೋಲು ಬಾರಿಸಿ ದಿಗ್ಗಜ ಫುಟ್ಬಾಲಿಗ ಗೇಬ್ರಿಯಲ್​ ಬಟಿಸ್ಟುವಾ ದಾಖಲೆಯನ್ನು ಸರಿಗಟ್ಟಿದರು.

83ನೇ ನಿಮಿಷದಲ್ಲಿ ನೆದರ್ಲೆಂಡ್ಸ್ ತಂಡದ ವೂಟ್ ವೆಘೋರ್ಸ್ಟ್ ಹೆಡ್ಡರ್​ ಮೂಲಕ ಗೋಲು ಗಳಿಸಿ 2-1 ಅಂತರ ಕಡಿಮೆ ಮಾಡಿದರು. ಬಳಿಕ ಕೊನೆಯ ಕ್ಷಣದಲ್ಲಿ ಬರ್ಗ್ವಿಜ್​ ಮತ್ತೊಂದು ಗೋಲು ಗಳಿಸಿ 2-2 ಸಮಬಲ ಸಾಧಿಸಿದರು. ಇದು ಅರ್ಜೆಂಟೀನಾಗೆ ಅರಗಿಸಿಕೊಳ್ಳಲು ಆಗಲಿಲ್ಲ. ಪಂದ್ಯ ಡ್ರಾ ಆದ ಕಾರಣ 30 ನಿಮಿಷ ಹೆಚ್ಚುವರಿ ಸಮಯದ ಆಟ ಆಡಿಸಲಾಯಿತು. ಆದರೆ, ಯಾವುದೇ ತಂಡ ಗೋಲು ಗಳಿಸದ ಕಾರಣ ಪಂದ್ಯವನ್ನು ಪೆನಾಲ್ಟಿ ಶೂಟೌಟ್​ಗೆ ನೀಡಲಾಯಿತು.

ಪೆನಾಲ್ಟಿಯಲ್ಲಿ ಡಚ್ಚರ ಶೂಟೌಟ್​:ಅರ್ಜೆಂಟೀನಾದ ಗೋಲ್​ಕೀಪರ್​ ಲೌಟಾರೊ ಮಾರ್ಟಿನೆಜ್​ ಮೊದಲ ಗೋಲು ಗಳಿಸಲು ಬಂದ ನೆದರ್​ಲ್ಯಾಂಡ್ಸ್​ನ ವ್ಯಾನ್​ ಡಿಜ್ಕ್​ ಕಿಕ್​ ಅನ್ನು ತಡೆದರು. ಬಳಿಕ ಲಿಯೋನೆಲ್​ ಮೆಸ್ಸಿ ಡಚ್ಚರ ಗೋಲಿಯನ್ನು ತಪ್ಪಿಸಿ ಗೋಲು ಬಾರಿಸಿದರು. ಇದರಿಂದ 1-0 ಮುನ್ನಡೆ ದೊರಕಿತು. ಬಳಿಕ ಸ್ಟೀವನ್ ಬರ್ಗುಯಿಸ್ ಗೋಲನ್ನೂ ಮಾರ್ಟಿನೆಜ್​ ತಡೆದರು. ಲಿಯಾಂಡ್ರೊ ಪರೆಡೆಸ್ ಗೋಲು ಗಳಿಸುವುದರೊಂದಿಗೆ ಅರ್ಜೆಂಟೀನಾ 2-0 ಮುನ್ನಡೆ ಸಾಧಿಸಿತು.

ಟೆನ್ ಕೂಪ್‌ಮೈನರ್ಸ್ ಡಚ್‌ನ ಮೂರನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಗೊಂಜಾಲೊ ಮೊಂಟಿಯೆಲ್ ಅರ್ಜೆಂಟೀನಾ ಪರ ಮೂರನೇ ನೇರ ಗೋಲು ಗಳಿಸಿ 3-1 ಅಂತರ ನೀಡಿದರು. ವೆಘೋರ್ಸ್ಟ್ ಮತ್ತೊಂದು ಗೋಲು ಹೊಡೆದರು. ನೆದರ್ಲೆಂಡ್ಸ್ 2-3 ರಲ್ಲಿ ಸಾಗಿತು. ಎಂಝೊ ಫೆರ್ನಾಂಡಿಸ್ ಗೋಲು ಗಳಿಸುವಲ್ಲಿ ಎಡವಿದರು.

ಈ ವೇಳೆ ಎರಡೂ ತಂಡಗಳಿಗೆ ಕೊನೆಯ ಒಂದು ಪೆನಾಲ್ಟಿ ಬಾಕಿ ಇತ್ತು. ಡಚ್‌ನ ಡಿ ಜೊಂಗ್ ಅದ್ಭುತ ಗೋಲು ಗಳಿಸಿ 3-3 ರಲ್ಲಿ ಸಮಬಲ ಮಾಡಿದರು. ಗೆಲುವಿನ ನಿರ್ಣಾಯಕ ಕಿಕ್ ಅನ್ನು ಅರ್ಜೆಂಟೀನಾ ಗಳಿಸುವ ಮೂಲಕ 4-3 ರಲ್ಲಿ ಗೆದ್ದು ಸೆಮೀಸ್​ಗೆ ತಲುಪುವ ಮೂಲಕ ಸಂಭ್ರಮಿಸಿದರು.

ಓದಿ:ಬ್ರೆಜಿಲ್​ ಮಣಿಸಿ ಸೆಮೀಸ್​ಗೇರಿದ ಕ್ರೊವೇಷಿಯಾ.. ಶೂಟೌಟ್​ನಲ್ಲಿ 4-2 ಗೋಲುಗಳಿಂದ ಜಯ

ABOUT THE AUTHOR

...view details