ಕರ್ನಾಟಕ

karnataka

ETV Bharat / sports

ಆರ್ಚರಿ ವಿಶ್ವಕಪ್: ರಿಕರ್ವ್​ ಮಿಶ್ರ ಡಬಲ್ಸ್​ನಲ್ಲಿ ಚಿನ್ನ ಗೆದ್ದ ತರುಣ್​ದೀಪ್ ರಾಯ್-ರಿಧಿ - ಆರ್ಚರಿ ವಿಶ್ವಕಪ್​ 2022

ತರುಣ್‌ದೀಪ್ ರೈ ಮತ್ತು ರಿಧಿ ಫೈನಲ್​​ ಘರ್ಷಣೆಯಲ್ಲಿ ಎರಡೂ ಬಾರಿ ಹಿನ್ನಡೆ ಅನುಭವಿಸಿದರೂ ಬ್ರಿಟನ್​​ ಬ್ರಿಯೋನಿ ಪಿಟ್​ಮ್ಯಾನ್ ಮತ್ತು ಅಲೆಕ್ಸ್​ ವೈಸ್​ ಅವರನ್ನು ಶೂಟ್​- ಆಫ್​ ಮೂಲಕ ಮಣಿಸಿದರು.

Archery World Cup 2022
Archery World Cup 2022

By

Published : Apr 24, 2022, 8:27 PM IST

ಅಂಟಲ್ಯ(ಟರ್ಕಿ): ತರುಣ್​ದೀಪ್​ ರಾಯ್​ ಮತ್ತು ರಿಧಿ ಜೋಡಿ ಟರ್ಕಿಯ ಅಂಟಲ್ಯದಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್​ನ ರಿಕರ್ವ್ ಮಿಕ್ಸಡ್​ ಫೈನಲ್​ನಲ್ಲಿ ಗ್ರೇಟ್​ ಬ್ರಿಟನ್​ ಜೋಡಿಯನ್ನು ಮಣಿಸಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದೆ.

ತರುಣ್‌ದೀಪ್ ರೈ ಮತ್ತು ರಿಧಿ ಫೈನಲ್​​ ಘರ್ಷಣೆಯಲ್ಲಿ ಎರಡು ಬಾರಿ ಹಿನ್ನಡೆ ಅನುಭವಿಸಿದರೂ, ಬ್ರಿಟನ್​​ ಬ್ರಿಯೋನಿ ಪಿಟ್​ಮ್ಯಾನ್ ಮತ್ತು ಅಲೆಕ್ಸ್​ ವೈಸ್​ ಅವರನ್ನು ಶೂಟ್​- ಆಫ್​ ಮೂಲಕ ಮಣಿಸಿದರು.

17 ವರ್ಷದ ರಿಧಿ ಮತ್ತು 38 ವರ್ಷದ ಒಲಿಂಪಿಯನ್​ ತರುಣ್​ದೀಪ್​ ಫೈನಲ್​ನಲ್ಲಿ ಆರಾಮದಾಯಕ ಆರಂಭ ಪಡೆಯಲಿಲ್ಲ. 0-2ರಲ್ಲಿ ಹಿನ್ನಡೆ ಅನುಭವಿಸಿದ ಭಾರತೀಯ ಜೋಡಿ ನಂತರ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ ಸಮಬಲ ಸಾಧಿಸಿತು. 4-4ರಲ್ಲಿ ಪಂದ್ಯ ಟೈ ಆಗಿದ್ದ ವೇಳೆ ಫಲಿತಾಂಶಕ್ಕೆ ಶೂಟ್​ ಆಫ್ ಮೊರೆ ಹೋಗಲಾಯಿತು. ಶೂಟ್​ ಆಫ್​ನಲ್ಲಿ ಭಾರತ 18-17ರಲ್ಲಿ ಗೆದ್ದು ಸ್ವರ್ಣ ಪದಕ ಪಡೆದುಕೊಂಡಿತು.

ಶನಿವಾರ ಭಾರತದ ಪುರುಷರ ಕಾಂಪೌಂಡ್​ ತಂಡ ಫ್ರಾನ್ಸ್​ ವಿರುದ್ಧ ಗೆದ್ದ ದೇಶಕ್ಕೆ ಮೊದಲ ಪದಕವನ್ನು ತಂದುಕೊಂಡಿತ್ತು. ಅಭಿಷೇಕ್​ ಶರ್ಮಾ, ಅಮನ್​ ಸೈನಿ ಮತ್ತು ರಜತ್ ಚೌಹಾಣ್ ಫ್ರೆಂಚ್ ತಂಡವನ್ನು 232-230ರ ಅಂತದಲ್ಲಿ ಮಣಿಸಿತ್ತು.

ಇದನ್ನೂ ಓದಿ:ಫಾರ್ಮ್​ ಸಮಸ್ಯೆ ಸಾಮಾನ್ಯ ನನಗೂ ಎದುರಾಗಿತ್ತು, ಕೊಹ್ಲಿ ಶೀಘ್ರವೇ ರಾರಾಜಿಸ್ತಾರೆ: ಪೀಟರ್ಸನ್​

ABOUT THE AUTHOR

...view details