ಕರ್ನಾಟಕ

karnataka

ETV Bharat / sports

ಎಎಫ್‌ಐನಿಂದ ಆನ್‌ಲೈನ್ ಪೋರ್ಟಲ್ ಆರಂಭ - ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ

Archery federation of india launches online affiliation portal
ಎಎಫ್‌ಐನಿಂದ ಆನ್‌ಲೈನ್ ಅಂಗಸಂಸ್ಥೆ ಪೋರ್ಟಲ್ ಆರಂಭ

By

Published : Jan 2, 2021, 9:58 AM IST

ನವದೆಹಲಿ:ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ (ಎಎಫ್‌ಐ) ಆನ್‌ಲೈನ್ ಪೋರ್ಟಲ್ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರೊಂದಿಗೆ, ವಿಶ್ವ ಬಿಲ್ಲುಗಾರಿಕೆ ನಿಷೇಧವನ್ನು ತೆಗೆದುಹಾಕುವ ಷರತ್ತನ್ನು ಎಎ​ಐ ಪೂರೈಸಿದೆ.

"ಈ ಪೋರ್ಟಲ್ ಮೂಲಕ, ಬಿಲ್ಲುಗಾರರು, ತರಬೇತುದಾರರು, ವಿಶ್ವ ಬಿಲ್ಲುಗಾರಿಕೆ ಅಥವಾ ಎಎಐ-ಮಾನ್ಯತೆ ಪಡೆದ ಚಾಂಪಿಯನ್‌ಶಿಪ್‌ಗಳು, ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬಯಸುವ ಅಧಿಕಾರಿಗಳು ಇನ್ಮುಂದೆ ಎಎ​ಐನ ಪೋರ್ಟಲ್ ನಿಂದ ಮಾಹಿತಿ ಪಡೆಯಬಹುದು." ಎಂದು ಎಎ​ಐ ತಿಳಿಸಿದೆ.

ಅರ್ಜಿದಾರರು ಡಿಜಿಟಲ್ ದಕ್ಷತೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು, ಅದು ರಾಷ್ಟ್ರೀಯ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್ ಅಥವಾ ಇತರ ಬಿಲ್ಲುಗಾರಿಕೆ ಚಟುವಟಿಕೆಗಳಲ್ಲಿ ಭಾಗವಹಿಸಲು ಕಡ್ಡಾಯವಾಗಿರುತ್ತದೆ.

ಓದಿ : ರಜಿನಿಕಾಂತ್ ಅವತಾರ ತಾಳಿದ ವಾರ್ನರ್.. ತಲೈವಾ ಸ್ಟೈಲ್​ನಲ್ಲಿ ಅಭಿಮಾನಿಗಳಿಗೆ ನ್ಯೂ ಇಯರ್ ವಿಶ್

ಎಎ​ಐ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಚಂದ್ರುಕರ್ ಮಾತನಾಡಿ, "ಕ್ರೀಡಾ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳನ್ನು ಪರಿಗಣಿಸಿ ಪ್ರತಿಯೊಬ್ಬ ಆಟಗಾರನಿಗೆ ಗುರುತಿನ ಚೀಟಿ ನೀಡಲಾಗುವುದು ಮತ್ತು ಅದನ್ನೂ ಈ ಪೋರ್ಟಲ್ ಅಡಿ ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ದತ್ತಾಂಶಗಳ ಆಧಾರದ ಮೇಲೆ ದೇಶೀಯ ಪಂದ್ಯಾವಳಿಗಳನ್ನು ನಡೆಸಲು ಸಂಘಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details