ಒಸ್ಲೋ(ನಾರ್ವೆ): ಭಾರತದ ಯುವ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ ಬುಧವಾರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮಲಿಕ್ ಸೆಮಿಫೈನಲ್ನಲ್ಲಿ ಜೂನಿಯರ್ ಯುರೋಪಿಯನ್ ಚಾಂಪಿಯನ್ ಉಕ್ರೇನ್ನ ಸೊಲೊಮಿಯಾ ವಿನ್ನಿಕ್ ಅವರನ್ನು 11-0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಏಷ್ಯನ್ ಚಾಂಪಿಯನ್ ಆಗಿರುವ 19 ವರ್ಷ ವಯಸ್ಸಿನ ಅನ್ಶು ಸೆಮಿಫೈನಲ್ ಬೌಟ್ನಲ್ಲಿ ಆರಂಭದಿಂದಲೂ ಎದುರಾಳಿಯ ಮೇಲೆ ನಿಯಂತ್ರಣ ಸಾಧಿಸಿದರು ಮತ್ತು ತಾಂತ್ರಿಕ ಶ್ರೇಷ್ಠತೆ ಮೆರೆದು 57 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಕೇವಲ 4 ಭಾರತೀಯ ಮಹಿಳಾ ಕುಸ್ತಿಪಟುಗಳು ಮಾತ್ರ ಪದಕ ಗೆದ್ದಿದ್ದಾರೆ. ಗೀತಾ ಫೋಗಟ್(2012), ಬಬಿತಾ ಫೋಗಟ್(2012), ಪೂಜಾ ಧಂಡ(2018) ಮತ್ತು ವಿನೇಶ್ ಫೋಗಟ್(2019) ಈ ಹಿಂದೆ ಕಂಚಿನ ಪದಕ ಪಡೆದಿದ್ದರು.