ಮುಂಬೈ :ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಅನಿನ ಲೇಖಾರಾ ಅವರಿಗೆ ನೂತನವಾಗಿ ವಿಶೇಷ ಚೇತರಿಗೆಂದೇ ತಯಾರಿಸುತ್ತಿರುವ SUV ಕಾರೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಮಹೀಂದ್ರ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ.
ಸೋಮವಾರ 19 ವರ್ಷದ ಜೈಪುರ ಮೂಲದ ಅವಿನ 10 ಮೀಟರ್ ಏರ್ ರೈಫಲ್ನಲ್ಲಿ ಪ್ಯಾರಾಲಿಂಪಿಕ್ಸ್ ದಾಖಲೆಯ 249.5 ಅಂಕಗಳೊಡನೆ ಚಿನ್ನ ಗೆದ್ದಿದ್ದರು. ಅಲ್ಲದೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಮತ್ತು ಒಟ್ಟಾ 4ನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1972ರಲ್ಲಿ ಈಜುಗಾರ ಮುರಳೀಕಾಂತ್ ಪೆಟ್ಕರ್, 2004 ಮತ್ತು 2012ರಲ್ಲಿ ಜಾವಲಿನ್ ಥ್ರೋವರ್ ದೇವೇಂದ್ರ ಜಜಾರಿಯಾ ಮತ್ತು 2016ರಲ್ಲಿ ಹೈಜಂಪರ್ ಮರಿಯಪ್ಪನ್ ತಂಗವೇಲು ಈ ಹಿಂದಿನ ಪ್ಯಾರಾಲಿಂಪಿಕ್ಸ್ಗಳಲ್ಲಿ ಚಿನ್ನದ ಪದಕ ಪಡೆದಿದ್ದರು.