ಸ್ಟಾವೆಂಜರ್(ನಾರ್ವೆ) :ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ನಾರ್ವೆ ಚೆಸ್ ಬ್ಲಿಟ್ಜ್ ಸ್ಪರ್ಧೆಯ ಏಳನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿ ನಾಲ್ಕನೇ ಸ್ಥಾನ ಪಡೆದರು. ಆದ್ರೆ, ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ನಾಲ್ಕು ಮತ್ತು ಒಂಬತ್ತನೇ ಸುತ್ತಿನಲ್ಲಿ ಕ್ರಮವಾಗಿ ಅನೀಶ್ ಗಿರಿ (ನೆದರ್ಲ್ಯಾಂಡ್ಸ್) ಮತ್ತು ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ (ಫ್ರಾನ್ಸ್) ವಿರುದ್ಧ ಸೋಲನ್ನು ಅನುಭವಿಸಿದರು. ಮಂಗಳವಾರ 10 ಆಟಗಾರರು ಬ್ಲಿಟ್ಜ್ ಸ್ಪರ್ಧೆಯಲ್ಲಿ 5 ಅಂಕಗಳೊಂದಿಗೆ ಆಟವನ್ನು ಮುಗಿಸಿದರು.
ಭಾರತದ ಗ್ರಾಂಡ್ ಮಾಸ್ಟರ್ ಎರಡನೇ ಸುತ್ತಿನಲ್ಲಿ ಸೋ ಜೊತೆ ಡ್ರಾ ಮಾಡುವ ಮೊದಲು ಬ್ಲಿಟ್ಜ್‌ನಲ್ಲಿ ಆರ್ಯನ್ ತಾರಿ (ನಾರ್ವೆ) ವಿರುದ್ಧ ಗೆಲುವಿನೊಂದಿಗೆ ಪ್ರಾರಂಭಿಸಿದರು. ಅವರು ಮೂರನೇ ಸುತ್ತಿನಲ್ಲಿ ಅನುಭವಿ ವೆಸೆಲಿನ್ ಟೊಪಲೋವ್ ವಿರುದ್ಧ ಜಯ ಸಾಧಿಸಿದರು. ತೈಮೂರ್ ರಾಡ್ಜಬೊವ್ ಅವರೊಂದಿಗೆ ಪಾಯಿಂಟ್ ಹಂಚಿಕೊಂಡರು.