ಭೂಪಾಲ್ :ಇಲ್ಲಿನ ಟಿಟಿ ನಗರ ಕ್ರೀಡಾಂಗಣದಲ್ಲಿ ಬುಧವಾರ ನಡೆದ 20ರ ವಯೋಮಿತಿಯೊಳಗಿನ 10,000 ಮೀಟರ್ ರೇಸ್ವಾಕ್ ಸ್ಪರ್ಧೆಯಲ್ಲಿ ಹರಿಯಾಣದ ಅಮಿತ್ ಖತ್ರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು, ದಾಖಲೆ ಬರೆದರು.
17 ವರ್ಷದ ಖತ್ರಿ, 40 ನಿಮಿಷ 40.97 ಸೆಕೆಂಡ್ಗಳಲ್ಲಿ ಜಯದ ಗಡಿ ದಾಟಿದರು. ತಮ್ಮದೇ ರಾಜ್ಯದ ಸಹ ಆಟಗಾರ ಪರಮ್ದೀಪ್ ಮೊರ್ ಅವರು ಕೇವಲ ಅರ್ಧ ನಿಮಿಷ ಅಂತರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.