ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಬುಧವಾರ ವಿಶ್ವಾಸ ಉಲ್ಲಂಘನೆಯ ಕಾರಣ ಅದರ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರನ್ನು ವಜಾಗೊಳಿಸಿದೆ. ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಮಂಗಳವಾರ ಪ್ರಭಾಕರನ್ ಅವರಿಗೆ ವಜಾ ಆದೇಶವನ್ನು ನೀಡಿದ್ದಾರೆ.
"ಎಐಎಫ್‌ಎಫ್ ಅಧ್ಯಕ್ಷರು ಪ್ರಭಾಕರನ್ ಅವರನ್ನು ವಜಾ ಮಾಡಲಾಗಿದೆ. ಅವರು ಇನ್ನು ಮುಂದೆ ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿಯಾಗಿಲ್ಲ. ಉಪ ಕಾರ್ಯದರ್ಶಿ ಸತ್ಯನಾರಾಯಣ ಅವರು ಹಂಗಾಮಿ ಕಾರ್ಯದರ್ಶಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ" ಎಂದು ಎಐಎಫ್‌ಎಫ್ ಉಪಾಧ್ಯಕ್ಷ ಎನ್‌ಎ ಹ್ಯಾರಿಸ್ ಹೇಳಿದ್ದಾರೆ.
ಎಐಎಫ್‌ಎಫ್ ಈ ಬೆಳವಣಿಗೆಯ ಬಗ್ಗೆ ಪತ್ರಿಕಾ ಹೇಳಿಕೆಯನ್ನು ತನ್ನ ಸಾಮಾಜಿಕ ಜಾತಲಾಣದ ಖಾತೆ ಆದ ಎಕ್ಸ್ಆ್ಯಪ್ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿ ಹಂಚಿಕೊಂಡಿದೆ. "ನವೆಂಬರ್ 7, 2023 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ನಂಬಿಕೆಯ ಉಲ್ಲಂಘನೆ ಕಾರಣದಿಂದ ಡಾ. ಶಾಜಿ ಪ್ರಭಾಕರನ್ ಅವರ ಸೇವೆಗಳನ್ನು ಕೊನೆಗೊಳಿಸಲಾಗಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಈ ಮೂಲಕ ಪ್ರಕಟಿಸುತ್ತದೆ. ಎಐಎಫ್‌ಎಫ್ ಉಪ ಕಾರ್ಯದರ್ಶಿ ಎಂ ಸತ್ಯನಾರಾಯಣ್ ಅವರು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಐಎಫ್‌ಎಫ್‌ನ ತಕ್ಷಣದಿಂದಲೇ ಜಾರಿಗೆ ಬರಲಿದೆ" ಎಂದು ಬಹಿರಂಗಪಡಿಸಿದೆ.