ಬರ್ಮಿಂಗ್ಹ್ಯಾಮ್:ಇಲ್ಲಿನ ಯುಟಿಲಿಟಾ ಅರೆನಾದಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ 2022 ರ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಸೋಲು ಕಂಡಿದ್ದಾರೆ.
62 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಶ್ರೀಕಾಂತ್ 21-9, 18-21, 19-21 ಸೆಟ್ಗಳಿಂದ ಸೋತರು. ಮೊದಲ ಸೆಟ್ನಲ್ಲಿ ಶ್ರೀಕಾಂತ್ ಪ್ರಾಬಲ್ಯ ಸಾಧಿಸಿದ್ದರು. ಬಳಿಕ ಗಿಂಟಿಂಗ್ ಉಳಿದ ಎರಡು ಸೆಟ್ಗಳಲ್ಲಿ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಜಯ ಸಾಧಿಸಿದರು. ಈ ಗೆಲುವಿನಿಂದಾಗಿ ಗಿಂಟಿಂಗ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.
ಓದಿ:ಕ್ಷಿಪಣಿ ಪರೀಕ್ಷೆಯಲ್ಲಿ ಫೇಲ್..ಸದ್ದು ಮಾಡ್ತಿದೆ ವೈರಲ್ ವಿಡಿಯೋ: ವಿಫಲತೆ ಬಗ್ಗೆ ಪಾಕ್ ಮೌನ!
ಇದಕ್ಕೂ ಮುನ್ನ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್ನ ಸಯಾಕಾ ತಕಹಶಿ ವಿರುದ್ಧ 21-19, 16-21, 21-17ರಿಂದ ಸೋಲು ಕಂಡಿದ್ದರು. ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜರ್ಮನ್ ಜೋಡಿಯ ವಿರುದ್ಧ ಸಮಗ್ರ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.