ಬರ್ಮಿಂಗ್ಹ್ಯಾಮ್:ಭಾರತ ಅನುಭವಿ ಶಟ್ಲರ್ಗಳಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಓಪನ್ ಮಹಿಳೆಯರ ಸಿಂಗಲ್ಸ್ನಲ್ಲಿ ಸೋಲು ಕಂಡು 2ನೇ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಟೂರ್ನಿಯಲ್ಲಿ 6ನೇ ಶ್ರೇಯಾಂಕ ಪಡೆದುಕೊಂಡಿದ್ದ 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಗುರುವಾರ ಜಪಾನ್ ಸಯಾಕ ತಕಹಶಿ ವಿರುದ್ಧ 19-21,21-16, 17-21ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು. ಸಿಂಧು ಸತತ 2ನೇ ಟೂರ್ನಮೆಂಟ್ನಲ್ಲಿ 2ನೇ ಸುತ್ತಿನಲ್ಲಿ ನಿರ್ಗಮಿಸಿದಂತಾಗಿದೆ. ಕಳೆದ ವಾರ ಜರ್ಮನ್ ಓಪನ್ನಲ್ಲಿ ಚೀನಾದ ಜಾಂಗ್ ಯಿ ಮನ್ ವಿರುದ್ಧ 14-21, 21-15, 14-21ರಲ್ಲಿ ಸೋಲು ಕಂಡಿದ್ದರು.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹಿರಿಯ ಶಟ್ಲರ್ ಸೈನಾ ನೆಹ್ವಾಲ್ 2ನೇ ಶ್ರೇಯಾಂಕದ ಜಪಾನ್ನ ಅಕಾನೆ ಯಮಗುಚಿ ವಿರುದ್ಧ 14-21, 21-17,17-21ರಲ್ಲಿ ಸೋಲು ಕಂಡಿದ್ದರು. ಇವರಿಬ್ಬರ ಸೋಲಿನೊಂದಿಗೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರ ಸವಾಲು ಅಂತ್ಯವಾಗಿದೆ.