ಬೆಲ್ಗ್ರೇಡ್: ಭಾರತದ 21 ವರ್ಷದ ಆಕಾಶ್ ಕುಮಾರ್ ಸರ್ಬಿಯಾದ ಬೆಲ್ಗ್ರೇಡ್ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಕಾಶ್ ಕಜಕಸ್ತಾನದ ಮಖ್ಮೂದ್ ಸಬಿರ್ಖಾನ್ ವಿರುದ್ಧ 0-5ರಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು. ಆದರೂ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಆಕಾಶ್ ಕುಮಾರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ 7ನೇ ಬಾಕ್ಸರ್ ಎನಿಸಿಕೊಂಡರು. ಈ ಮೊದಲು ವಿಜೇಂದರ್ ಸಿಂಗ್ 2009ರಲ್ಲಿ (ಕಂಚು), ವಿಕಾಶ್ ಕ್ರಿಷನ್ 2011ರಲ್ಲಿ (ಕಂಚು), ಶಿವಥಾಪ 2015ರಲ್ಲಿ(ಕಂಚು) ಗೌರವ್ ಬಿಧುರಿ 2017ರಲ್ಲಿ(ಕಂಚು), ಅಮಿತ್ ಪಂಘಲ್ 2019ರಲ್ಲಿ(ಬೆಳ್ಳಿ) ಮತ್ತು ಮನೀಶ್ ಕೌಶಿಕ್ 2019ರಲ್ಲಿ(ಕಂಚು) ಪದಕ ಗೆದ್ದಿದ್ದರು.
ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಆಕಾಶ್ ಕಳೆದ ಸೆಪ್ಟೆಂಬರ್ನಲ್ಲಿ ಶ್ವಾಸಕೋಶ ಕ್ಯಾನ್ಸರ್ನಿಂದ ತಾಯಿಯನ್ನು ಕಳೆದುಕೊಂಡಿದ್ದರು. ಆದರೂ ಬಳ್ಳಾರಿಯಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿ ಚಾಂಪಿಯನ್ ಆಗಿದ್ದರು. ಇದೀಗ 2016ರ ಒಲಿಂಪಿಕ್ಸ್ ಪದಕ ವಿಜೇತನಿಗೆ ಮಣ್ಣುಮುಕ್ಕಿಸಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಯಶಸ್ವಿಯಾಗಿದ್ದಾರೆ
ಇದನ್ನು ಓದಿ:ದ್ರಾವಿಡ್ಗೆ ತಂಡವನ್ನು ಮುನ್ನಡೆಸುವ ಪಾಠ ಮಾಡ್ಬೇಡಿ, ಅವರಿಚ್ಛೆಯಂತೆ ಬಿಟ್ಬಿಡಿ: ಬಿಸಿಸಿಐಗೆ ಜಡೇಜಾ ಮನವಿ