ಕೈರೋ:ಈಜಿಪ್ಟ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ ಪುರುಷರ ವೈಯಕ್ತಿಕ 50 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ 16-6 ರಿಂದ ಆಸ್ಟ್ರಿಯಾದ ಅಲೆಕ್ಸಾಂಡರ್ ಸ್ಮಿರ್ಲ್ ಅವರನ್ನು ಐಶ್ವರಿ ತೋಮರ್ ಸೋಲಿಸಿದರು.
ಐಎಸ್ಎಸ್ಎಫ್ ವಿಶ್ವಕಪ್: ಶೂಟಿಂಗ್‌ನಲ್ಲಿ ಐಶ್ವರಿ ತೋಮರ್ಗೆ ಚಿನ್ನದ ಪದಕ - ಬಂಗಾರದ ಪದಕ
ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಐಎಸ್ಎಸ್ಎಫ್ ವಿಶ್ವಕಪ್: ಶೂಟಿಂಗ್‌ನಲ್ಲಿ ಭಾರತದ ಐಶ್ವರಿ ತೋಮರ್ಗೆ ಚಿನ್ನದ ಪದಕ
ಕಳೆದ ವರ್ಷ ಚಗ್ವಾನ್ ವಿಶ್ವಕಪ್‌ನಲ್ಲೂ 22 ವರ್ಷದ ತೋಮರ್ ಚಿನ್ನ ಗೆದ್ದಿದ್ದರು. ಇದಕ್ಕೂ ಮೊದಲು ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತದ ತಿಲೋತ್ತಮಾ ಸೇನ್ ಕಂಚಿನ ಪದಕ ಪಡೆದಿದ್ದರು. ಇದು ಭಾರತದ ಪಟುಗಳು ವೈಯಕ್ತಿಕವಾಗಿ ಗೆದ್ದ ಮೂರನೇ ವಿಶ್ವಕಪ್ ಚಿನ್ನದ ಪದಕವಾಗಿದೆ. ಪ್ರಸ್ತುತ ಭಾರತ ನಾಲ್ಕು ಚಿನ್ನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡು ಬಂಗಾರ ಪದಕಗಳೊಂದಿಗೆ ಹಂಗೇರಿ ದೇಶ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಟಾಟಾ ಪ್ರಾಯೋಜಕತ್ವದಲ್ಲಿ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್