ಕೋಲ್ಕತ್ತಾ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಅಂಡರ್-17 ಮಹಿಳಾ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಅಂಡರ್-17 ಮಹಿಳಾ ವಿಶ್ವಕಪ್‌ಗೂ ಮುನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಯುರೋಪ್‌ನಲ್ಲಿ ಫುಟ್ಬಾಲ್ ತಂಡದ ಬಾಲಕಿಯರ ಟ್ರಿಪ್‌ನಲ್ಲಿ ಅನುಚಿತ ವರ್ತನೆ ಆರೋಪ ಹಿನ್ನೆಲೆ ತಾತ್ಕಾಲಿಕವಾಗಿ ಅಮಾನತುಗೊಳಿಸಿ ತನಿಖೆಗೆ ಒಳಗಾಗುವಂತೆ ಎಐಎಫ್‌ಎಫ್ ಸೂಚಿಸಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ವ್ಯವಹಾರಗಳನ್ನು ನಿರ್ವಹಿಸುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯು ಅನುಚಿತ ವರ್ತನೆ ಘಟನೆಯ ಸಂಬಂಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ಮಾಹಿತಿ ನೀಡಿದೆ. ಭಾರತದ ಅಂಡರ್-17 ಮಹಿಳಾ ತಂಡದ ಫುಟ್ಬಾಲ್ ಆಟಗಾರ್ತಿಯೊಬ್ಬರಿಗೆ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಲೈಂಗಿಕ ಕಿರುಕುಳ/ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಆರೋಪ ಎದುರಿಸುತ್ತಿರುವ ಸಹಾಯಕ ಕೋಚ್ ಆಂಬ್ರೋಸ್ ನಾರ್ವೆಯಲ್ಲಿದ್ದು, ಈ ಕೂಡಲೇ ದೇಶಕ್ಕೆ ಮರಳುವಂತೆ ನಿನ್ನೆ ಸೂಚಿಸಲಾಗಿದೆ.