ನವದೆಹಲಿ: ಮಹಿಳಾ ಐಪಿಎಲ್ ತಂಡದ ಖರೀದಿ ಮುಗಿದಿದ್ದು, ಮಾರ್ಚ್ 4ರಿಂದ ಮಹಿಳಾ ಕ್ರೀಡಾಪಟುಗಳು ಐಪಿಎಲ್ ಆಡುವ ಮೂಲಕ ಜಗತ್ತಿನ ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಮೊದಲ ಬಾರಿ ಕಬಡ್ಡಿಯಲ್ಲೂ ಮಹಿಳಾ ತಂಡ ರಚನೆಗೆ ಮುಂದಾಗಲಾಗಿದೆ. ಈಗಾಗಲೇ ಪುರುಷ ಪ್ರೋ ಕಬಡ್ಡಿ ದೇಶದಲ್ಲಿ ಅನೇಕರ ಆಕರ್ಷಣೆಯಾಗಿದೆ. ಈ ಹಿನ್ನೆಲೆ ಈಗ ಇದರಲ್ಲೂ ಕೂಡ ಮಹಿಳಾ ಪ್ರೊ ಕಬಡ್ಡಿ ಲೀಗ್ ಆರಂಭಿಸುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ದೇಶದಲ್ಲಿ ಮಹಿಳಾ ವೃತ್ತಿಪರ ಫ್ರಾಂಚೈಸಿಗಳನ್ನು ಉದ್ಘಾಟಿಸುವ ಸಾಧ್ಯತೆ ಕುರಿತು ಕೂಡ ಮಾತುಕತೆಗಳು ನಡೆಯುತ್ತಿದೆ.
ಈ ಸಂಬಂಧ ಮಾತನಾಡಿರುವ ಪ್ರೋ ಕಬಡ್ಡಿ ಲೀಗ್ ಸಂಘಟಕರಾಗಿರುವ ಮಶಾಲ್ ಸ್ಪೋರ್ಟ್ಸ್, ಇದೀಗ 10ನೇ ವರ್ಷ ಯಶಸ್ವಿಯಾಗಿ ಪ್ರೊ ಕಬಡ್ಡಿ ನಡೆಯುತ್ತಿದೆ. ಇದೀಗ ಅಮೆಚೂರು ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಮತ್ತು ಇಂಟರ್ನ್ಯಾಷನಲ್ ಕಬ್ಬಡಿ ಫೆಡರೇಷನ್ (ಐಕೆಎಫ್) ಸಹಯೋಗದಿಂದ ಮಹಿಳಾ ಲೀಗ್ ಉದ್ಘಾಟಿಸಲು ಯೋಜನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಮಹಿಳಾ ಐಪಿಎಲ್ನಿಂದ ಉತ್ಸಾಹಗೊಂಡು ಇದೀಗ ಮಹಿಳಾ ತಂಡ ರಚಿಸುವ ಚಿಂತನೆ ನಡೆದಿದೆ. ಪುರುಷರ ಕಬಡ್ಡಿಯಲ್ಲಿ ಯಶಸ್ಸು ಕಂಡಿದ್ದು, ಇದೇ ಯಶಸ್ಸಿನ ಆಧಾರದ ಮೇಲೆ ಮಹಿಳಾ ವೃತ್ತಿಪರ ಕಬಡ್ಡಿ ಲೀಗ್ ಅನ್ನು ರಚಿಸುವುದು ನಮ್ಮ ಯೋಜನೆಯಾಗಿದೆ ಎಂದು ಮಾಶಲ್ ಸ್ಪೋರ್ಟ್ಸ್ ಸಿಇಒ ಮತ್ತು ಪಿಕೆಲ್ ಆಯುಕ್ತರಾಗಿರುವ ಅನೂಪಮ್ ಗೋಸ್ವಾಮಿ ತಿಳಿಸಿದ್ದಾರೆ.
ಎಕೆಎಫ್ಯು ಸೇರಿದಂತೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಸೇರಿದಂತೆ ನಮ್ಮ ಹಲವು ಸ್ಟೇಕ್ ಹೋಲ್ಡರ್ ಜೊತೆ ಈ ಮಹಿಳಾ ಲೀಗ್ ಕುರಿತು ಕಾರ್ಯ ನಿರ್ವಹಿಸುವ ಸಂಬಂಧ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ. ಟೆಸ್ಟ್ ಟೂರ್ನಮೆಂಟ್, ಮಹಿಳಾ ಕಬಡ್ಡಿ ಸವಾಲಿನ ಕೆಲಸವಾಗಿದೆ. ಈಗಾಗಲೇ ಫೈರ್ಬರ್ಡ್, ಐಎಸ್ದಿವಾಸ್ ಮತ್ತು ಸ್ಟ್ರೋಮ್ಕ್ವೀನ್ಸ್ 2016ರಲ್ಲಿಯೇ ಸಂಘಟನೆ ಆಗಿದೆ.