ಕರ್ನಾಟಕ

karnataka

ETV Bharat / sports

ನೀರಜ್​ ಸಾಧನೆಯ ನೆನಪಿಗೆ ಆಗಸ್ಟ್​ 7ರಂದು ಜಾವಲಿನ್ ಥ್ರೋ ದಿನಾಚರಣೆಗೆ AFI ನಿರ್ಧಾರ - ರಾಷ್ಟ್ರೀಯ ಫೆಡರೇಷನ್​ ಆಫ್​ ಇಂಡಿಯಾ

ಭವಿಷ್ಯದಲ್ಲಿ ಎಎಫ್‌ಐ ನನ್ನ ಸಾಧನೆ ನೆನಪಿನಲ್ಲಿಟ್ಟುಕೊಳ್ಳಲು ತೆಗೆದುಕೊಂಡಿರುವ ಈ ನಿರ್ಧಾರ ನನಗೆ ತುಂಬಾ ಖುಷಿಯಿದೆ. ನನ್ನ ಸಾಧನೆಯು ಈ ದೇಶದ ಯುವಕರನ್ನು ಅಥ್ಲೆಟಿಕ್ಸ್, ವಿಶೇಷವಾಗಿ ಜಾವೆಲಿನ್ ಕ್ರೀಡೆಯ ಆಯ್ಕೆಗೆ ಪ್ರೇರೇಪಿಸಲು ಒಂದು ಕಾರಣವಾದರೆ, ನನಗೆ ಅದಕ್ಕಿಂತ ಬೇರೆ ಸಂತೋಷವಿಲ್ಲ..

ಆಗಸ್ಟ್​ 7ರಂದು ಜಾವಲಿನ್ ಥ್ರೋ ದಿನಾಚರಣೆ
ನೀರಜ್​ ಚೋಪ್ರಾ

By

Published : Aug 10, 2021, 7:09 PM IST

ನವದೆಹಲಿ :ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಜಾವಲಿನ್ ಥ್ರೋವರ್​ ನೀರಜ್​ ಚೋಪ್ರಾ ಅವರ ಸಾಧನೆಯ ನೆನಪಿಗಾಗಿ ಆಗಸ್ಟ್​ 7ರಂದು ಜಾವಲಿನ್ ಥ್ರೋ ದಿನಾಚಾರಣೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್​ ಆಫ್​ ಇಂಡಿಯಾ ನಿರ್ಧರಿಸಿದೆ.

ಆಗಸ್ಟ್​​ 7ರಂದು ನೀರಜ್​ ಚೋಪ್ರಾ ಜಾವಲಿನ್​ನ 87.58 ಮೀಟರ್​ ದೂರ ಎಸೆಯುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು.

"ಭಾರತದಾದ್ಯಂತ ಜಾವಲಿನ್​ ಥ್ರೋ ಕ್ರೀಡೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಆಗಸ್ಟ್‌ 7ರಂದು ರಾಷ್ಟ್ರೀಯ ಜಾವಲಿನ್ ಡೇ ಆಚರಣೆ ಮಾಡಲಾಗುವುದು. ಜೊತೆಗೆ ರಾಜ್ಯಮಟ್ಟದಲ್ಲಿ ಜಾವಲಿನ್ ಥ್ರೋ ಸ್ಪರ್ಧೆ ಏರ್ಪಡಿಸಲಾಗುವುದು" ಎಂದು ಅಥ್ಲೆಟಿಕ್ಸ್ ಫೆಡೆರೇಷನ್​ ಆಫ್ ಇಂಡಿಯಾದ ಪ್ಲಾನಿಂಗ್ ಕಮಿಷನ್​ ಅಧ್ಯಕ್ಷ ಲಲಿತ್ ಭನೋತ್ ತಿಳಿಸಿದ್ದಾರೆ.

ಅಂತರ್​ ಜಿಲ್ಲಾ ಸ್ಪರ್ಧೆ ಏರ್ಪಡಿಸುವಾಗ ನಾವೇ ಜಾವಲಿನ್​ಗಳನ್ನು ಒದಗಿಸಿ ಕೊಡುತ್ತೇವೆ. ಈ ಕ್ರೀಡೆಯನ್ನು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಾಗಿ ವಿಸ್ತರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ 2018ರಿಂದ ಎಎಫ್​ಐ ರಾಷ್ಟ್ರೀಯ ಜಾವಲಿನ್​ ಥ್ರೋ ಸ್ಪರ್ಧೆ ಏರ್ಪಡಿಸಿಕೊಂಡು ಬರುತ್ತಿದೆ. ಈ ವರ್ಷ ಅಕ್ಟೋಬರ್​ನಲ್ಲಿ 3ನೇ ಆವೃತ್ತಿಯ ಸ್ಪರ್ಧೆ ನಡೆಯಲಿದೆ.

ಭವಿಷ್ಯದಲ್ಲಿ ಎಎಫ್‌ಐ ನನ್ನ ಸಾಧನೆ ನೆನಪಿನಲ್ಲಿಟ್ಟುಕೊಳ್ಳಲು ತೆಗೆದುಕೊಂಡಿರುವ ಈ ನಿರ್ಧಾರ ನನಗೆ ತುಂಬಾ ಖುಷಿಯಿದೆ. ನನ್ನ ಸಾಧನೆಯು ಈ ದೇಶದ ಯುವಕರನ್ನು ಅಥ್ಲೆಟಿಕ್ಸ್, ವಿಶೇಷವಾಗಿ ಜಾವೆಲಿನ್ ಕ್ರೀಡೆಯ ಆಯ್ಕೆಗೆ ಪ್ರೇರೇಪಿಸಲು ಒಂದು ಕಾರಣವಾದರೆ, ನನಗೆ ಅದಕ್ಕಿಂತ ಬೇರೆ ಸಂತೋಷವಿಲ್ಲ ಎಂದು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚೋಪ್ರಾ ತಿಳಿಸಿದ್ದಾರೆ.

ಇದನ್ನು ಓದಿ : ಚಿನ್ನದ ಪದಕ ದೇಶಕ್ಕೆ ಅರ್ಪಿಸಿದ ನೀರಜ್​.. ಅಭಿನಂದನಾ ಸಮಾರಂಭದಲ್ಲಿ ಮನದಾಳ ಬಿಚ್ಚಿಟ್ಟ ಅಥ್ಲೀಟ್ಸ್​!

ABOUT THE AUTHOR

...view details