ಕರ್ನಾಟಕ

karnataka

ETV Bharat / sports

ಖೇಲ್ ರತ್ನ ಪ್ರಶಸ್ತಿಗೆ ನೀರಜ್ ಚೋಪ್ರಾ ಹೆಸರು ಶಿಫಾರಸು ಮಾಡಿದ ಎಎಫ್‌ಐ - ಏಸ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ

ಏಷ್ಯನ್ ಗೇಮ್ಸ್ ನಲ್ಲಿ 100 ಮೀಟರ್​ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆ ಭಾರತದ ಖ್ಯಾತ ಅಥ್ಲೆಟಿಕ್ ತಾರೆ ದ್ಯುತಿ ಚಂದ್, ಏಷ್ಯನ್‌ ಕ್ರೀಡಾಕೂಟದ 800 ಮೀಟರ್​ ಚಾಂಪಿಯನ್‌ ಮಂಜಿತ್‌ ಸಿಂಗ್ ಮತ್ತು ಏಷ್ಯಾದ ಚಾಂಪಿಯನ್ ಮಧ್ಯಮ ದೂರ ಓಟಗಾರ್ತಿ ಪಿ.ಯು.ಚಿತ್ರಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಏಸ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ
ಏಸ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ

By

Published : Jun 3, 2020, 11:53 PM IST

ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಏಸ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ನಾಮ ನಿರ್ದೇಶನ ಮಾಡಿದೆ.

ಏಷ್ಯನ್ ಗೇಮ್ಸ್​ನಲ್ಲಿ 100 ಮೀಟರ್​ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆಯಾಗಿರುವ ಭಾರತದ ಖ್ಯಾತ ಅಥ್ಲೆಟಿಕ್ ತಾರೆ ದ್ಯುತಿ ಚಂದ್, ಏಷ್ಯನ್‌ ಕ್ರೀಡಾಕೂಟದ 800 ಮೀ ಚಾಂಪಿಯನ್‌ ಮಂಜಿತ್‌ ಸಿಂಗ್ ಮತ್ತು ಏಷ್ಯಾದ ಚಾಂಪಿಯನ್ ಮಧ್ಯಮ ದೂರ ಓಟಗಾರ್ತಿ ಪಿ.ಯು.ಚಿತ್ರಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕ್ರೀಡಾ ಸಚಿವಾಲಯವು ರಚಿಸಿದ ಸಮಿತಿಯು ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ನೀಡಲಾಗುವ ಪ್ರಶಸ್ತಿಗೆ ವಿವಿಧ ರಾಷ್ಟ್ರೀಯ ಒಕ್ಕೂಟಗಳಿಂದ ಪಡೆದ ನಾಮಪತ್ರಗಳನ್ನು ಕಿರುಪಟ್ಟಿ ಮಾಡುತ್ತದೆ.

ಎಎಫ್‌ಐ

ಈ ಬಾರಿ ನೀರಜ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆಂಬುದು ನಮಗೆ ಖಚಿತವಾಗಿದೆ ಎಂದು ಎಎಫ್‌ಐ ಅಧ್ಯಕ್ಷ ಅಡಿಲೆ ಸುಮರಿವಾಲ್ಲಾ ಹೇಳಿದ್ದಾರೆ .

ಅಪಾರ ಜನಪ್ರಿಯ ಕ್ರೀಡಾಪಟು 2021ರ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಅವರ ಸಾಧನೆಗಾಗಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಇದು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ಅವರು ಎಎಫ್‌ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರಜ್ ಚೋಪ್ರಾ

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಂತಾರಾಷ್ಟ್ರೀಯ ಕೋಚಿಂಗ್ ಪುಷ್ಟೀಕರಣ ಪ್ರಮಾಣಪತ್ರ ಕಾರ್ಯಕ್ರಮವನ್ನು ಗೌರವಗಳೊಂದಿಗೆ ಪೂರ್ಣಗೊಳಿಸಿದ ಏಕೈಕ ಭಾರತೀಯ ಉಪ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

1982 ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಕುಲದೀಪ್ ಸಿಂಗ್ ಭುಲ್ಲರ್ ಮತ್ತು 2002 ರ ಬುಸಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದ ಸ್ಪ್ರಿಂಟರ್ ಜಿನ್ಸಿ ಫಿಲಿಪ್, ಧ್ಯಾನ್ ಚಂದ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ABOUT THE AUTHOR

...view details