ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಅಂಗಳಕ್ಕೂ ಕಾಲಿಟ್ಟ ತಾಲಿಬಾನ್ ದಾಂಡಿಗರು: ನಮಗಾಗಿ ಪ್ರಾರ್ಥಿಸಿ ಎಂದ ಸ್ಟಾರ್ ಕ್ರಿಕೆಟರ್

ಕೆಲದಿನಗಳ ಹಿಂದೆ ಅಘ್ಘಾನಿಸ್ತಾನ ಸೇರಿದಂತೆ ಕಾಬೂಲ್​ಗೆ ಲಗ್ಗೆ ಇಟ್ಟ ತಾಲಿಬಾನ್ ಉಗ್ರರು ಈಗ ಕ್ರಿಕೆಟ್ ಅಂಗಳದವರೆಗೂ ಬಂದಿದ್ದಾರೆ. ದೇಶವನ್ನು ಸುತ್ತುವರೆದು ಸ್ಥಳೀಯರಿಗೆ ಕಾಟ ಕೊಡುವ ಮೂಲಕ ತಮ್ಮ ಅಟ್ಟಹಾವನ್ನು ಮುಂದುವರೆಸಿದ್ದಾರೆ. ಇಂದಿನ ಅವರ ನಡೆಗೆ ಅಲ್ಲಿನ ಕ್ರಿಕೆಟ್ ಆಟಗಾರರು ಸಹ ಹಿಡಿಶಾಪ ಹಾಕಿದ್ದಾರೆ. ಹಲವರು ಟ್ವೀಟ್​ ಮಾಡಿ ಮನವಿ ಮಾಡಿಕೊಂಡಿದ್ದಾರೆ.

By

Published : Aug 19, 2021, 7:45 PM IST

Afghanistan Cricketers Rashid Khan Tweet
ತಾಲಿಬಾನ್ ದಾಂಡಿಗರು

ಕಾಬೂಲ್:ಅಘ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಉಗ್ರರು ಈಗ ಕ್ರಿಕೆಟ್​ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಆಘ್ಘನ್ ಕ್ರಿಕೆಟ್ ಮಂಡಳಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ದಾಂಡಿಗರು ಅದರ ಮೇಲೂ ಹಿಡಿತ ಸಾಧಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಇದು ಅಲ್ಲಿನ ಕ್ರಿಕೆಟ್​ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಅಘ್ಘಾನಿಸ್ತಾನದ ಸ್ಟಾರ್ ಕ್ರಿಕೆಟರ್ ರಶೀದ್ ಖಾನ್ ಸಹ ಭಾವನಾತ್ಮಕ ಟ್ವೀಟ್​ವೊಂದನ್ನು ಮಾಡುವ​ ಮೂಲಕ ನೋವು ಹೊರ ಹಾಕಿದ್ದಾರೆ.

ಸ್ಟಾರ್ ಕ್ರಿಕೆಟರ್ ರಶೀದ್ ಖಾನ್

ರಾಜಧಾನಿ ಕಾಬೂಲ್​ ಸೇರಿದಂತೆ ದೇಶದ ಇತರ ಮಹಾನಗರಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ತಾಲಿಬಾನಿಗಳು ಈಗ ಕ್ರಿಕೆಟರ್ ಮೈದಾನವನ್ನೂ ಬಿಟ್ಟಿಲ್ಲ. ಅಘ್ಘಾನಿಸ್ತಾನದ ಎಲ್ಲ ಕ್ರಿಕೆಟ್ ಸ್ಟೇಡಿಯಂಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಅಘ್ಘಾನಿಸ್ತಾನದ ಕ್ರಿಕೆಟಿಗರ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ತಾಲಿಬಾನ್ ಉಗ್ರರು ಅಘ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಹೆಜ್ಜೆಗಳು ಇಷ್ಟಕ್ಕೆ ನಿಲ್ಲುತ್ತಿಲ್ಲ. ಜನರು ಭಯ ಭೀತಿಯಿಂದ ದೇಶವನ್ನು ತೊರೆಯುತ್ತಿದ್ದಾರೆ. ಇವೆಲ್ಲವನ್ನೂ ನೋಡಿ ನನಗೆ ನಿದ್ದೆ ಸಹ ಬರುತ್ತಿಲ್ಲ. ದಯವಿಟ್ಟು ಎಲ್ಲರೂ ನಮಗಾಗಿ ಪ್ರಾರ್ಥಿಸಿ ಎಂದು ಅಘ್ಘಾನಿಸ್ತಾನದ ಸ್ಟಾರ್ ಕ್ರಿಕೆಟರ್ ರಶೀದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸ್ಟಾರ್ ಕ್ರಿಕೆಟರ್ ರಶೀದ್ ಖಾನ್

ಅಘ್ಘಾನಿಸ್ತಾನ ತಂಡ ಮುಂಬರುವ ಟಿ-20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದ್ದು, ಈ ನಡುವೆ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ. ಹಾಗಾಗಿ ಮುಂದಿನ ದಿನಮಾನಗಳಲ್ಲಿ ಇದು ಯಾವ ಮಟ್ಟಕೆ ಹೋಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ABOUT THE AUTHOR

...view details