ಹೈದರಾಬಾದ್: ಭಾರತೀಯ ಗಾಲ್ಫರ್ ಕರ್ನಾಟಕದವರೇ ಆದ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ಅದಿತಿ ಅಶೋಕ್ 45ನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆತಿದೆ.
ಈ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಅದಿತಿ ಅಶೋಕ್‌ಗೆ ಅಭಿನಂದನೆಗಳನ್ನು ತಿಳಿಸಿದೆ. 2018ರಲ್ಲಿ ಆರಂಭಗೊಂಡ ಅರ್ಹತಾ ಸುತ್ತಿನಲ್ಲಿ ಸದಾ ಮುನ್ನಡೆ ಕಾಯ್ದಕೊಂಡು ಬಂದಿರುವ ಅದಿತಿ, ಮೂರು ವರ್ಷಗಳ ಹಿಂದೆ ಒಲಿಂಪಿಕ್ಸ್ ಶ್ರೇಯಾಂಕ ಪಟ್ಟಿಯಲ್ಲಿ 28ನೇ ಸ್ಥಾನ ಪಡೆದಿದ್ದರು.
ಪುರುಷರ ವಿಭಾಗದಲ್ಲಿ ಅನಿರ್ಬನ್ ಲಾಹಿರಿ 60ನೇ ಶ್ರೇಯಾಂಕದೊಂದಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಉದಯ್ ಮಾನೆ ಕಾಯ್ದಿರಿಸಿದ ಗಾಲ್ಫರ್‌ಗಳ ಪಟ್ಟಿಯಲ್ಲಿ ಇವರೂ ಇದ್ದಾರೆ. ಜುಲೈ 6ರಂದು ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ಸ್ಪರ್ಧಿಗಳ ಪೈಕಿ ಯಾರಾದರೂ ಕ್ರೀಡಾಕೂಟದಿಂದ ಹಿಂದೆ ಸರಿದಲ್ಲಿ ಉದಯ್‌ಗೆ ಸ್ಥಾನ ಸಿಗಬಹುದು.
ಇದನ್ನೂ ಓದಿ : ಅಥ್ಲೀಟ್ ಅನ್ನೂ ರಾಣಿಗೆ ರ್‍ಯಾಂಕಿಂಗ್ ಆಧಾರದ ಮೇಲೆ ಒಲಿಂಪಿಕ್ ಕೋಟಾ!