ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್):ಕಾಮನ್‌ವೆಲ್ತ್ ಗೇಮ್ಸ್ನ ಅಂತಿಮ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ತಂಡದ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಮಾಲ್ ಮಾಡಿದರು. ಫೈನಲ್ನಲ್ಲಿ ಎದುರಾಳಿ ಆಟಗಾರರ ವಿರುದ್ಧ ಅಧಿಕಾರಯುತ ಪ್ರದರ್ಶನ ನೀಡಿ ಚಿನ್ನಕ್ಕೆ ಮುತ್ತಿಕ್ಕಿದರು.
ಮತ್ತೊಂದೆಡೆ, ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ಸ್ನಲ್ಲಿ ಅಚಂತಾ ಶರತ್ ಫೈನಲ್ನಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ವಿರುದ್ಧ ಗೆಲುವು ಸಾಧಿಸಿ ಸ್ವರ್ಣ ಪದಕ ತನ್ನದಾಗಿಸಿಕೊಂಡು ಸಂಭ್ರಮಿಸಿದರು. ಈ ಮೂಲಕ ಟಿಟಿಯಲ್ಲಿ 16 ವರ್ಷಗಳ ಬಳಿಕ ಭಾರತದ ಕ್ರೀಡಾಳುವೊಬ್ಬರು ಸ್ವರ್ಣ ಸಾಧನೆ ಮಾಡಿದಂತಾಗಿದೆ. ಇನ್ನೊಂದೆಡೆ, ಟೇಬಲ್ ಟೆನ್ನಿಸ್ನಲ್ಲಿ ಭಾರತದ ಸತ್ಯನ್ ಜ್ಞಾನಶೇಖರನ್ ಅವರು ಇಂಗ್ಲೆಂಡ್‌ನ ಡ್ರಿಂಕ್ಹಾಲ್ ವಿರುದ್ಧ 11-9 11-3 11-5 8-11 9-11 10-12 11-9 ಅಂತರದಿಂದ ಗೆಲುವು ಸಾಧಿಸಿ ಕಂಚಿಗೆ ಕೊರಳೊಡ್ಡಿದರು.
40ನೇ ವಯಸ್ಸಿನಲ್ಲಿ ಕಮಾನ್ ಮಾಡಿದ ಅಚಂತಾ ಶರತ್ ಕಮಲ್:ಕಾಮನ್‌ವೆಲ್ತ್ ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತದ 40ರ ಹರೆಯದ ಟೆನಿಸ್ ಪಟು ಅಚಂತಾ ಶರತ್ ಕಮಲ್ ಕಮಾಲ್ ಮಾಡಿದ್ದು, ಚಿನ್ನದ ಪದಕ ಗೆದ್ದಿದ್ದಾರೆ. ಎದುರಾಳಿ ವಿರುದ್ಧ 11-13, 11-7, 11-2, 11-6, 11-8 ರಿಂದ ಗೆಲುವು ದಾಖಲಿಸಿದರು. ಇದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶರತ್ ಗೆದ್ದಿರುವ 13ನೇ ಪದಕವಾಗಿದೆ.