ನವದೆಹಲಿ: ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ ಅನೇಕ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿರುವ ಪಂಕಜ್ ಅಡ್ವಾಣಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಮವಾರ ಬೆಳಗ್ಗೆ ಜ್ವರ ಕಾಣಿಸಿಕೊಂಡ ಕಾರಣದಿಂದ ಮನೆಯಲ್ಲಿಯೇ ಟೆಸ್ಟ್ ಕಿಟ್ ಮೂಲಕ ಸೋಂಕು ಪರೀಕ್ಷೆ ಮಾಡಿಕೊಂಡಾಗ ಕೋವಿಡ್ ಸೋಂಕು ಇರುವುದು ಕಂಡುಬಂದಿದೆ.
ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ, ನಾನು ಸೋಂಕಿಗೆ ಒಳಗಾಗಿದ್ದೇನೆ. ನಾನು ಹೋಮ್ ಟೆಸ್ಟ್ ಕಿಟ್ ಮೂಲಕ ಪರೀಕ್ಷಿಸಿಕೊಂಡಾಗ, ಸೋಂಕು ಇರುವುದು ದೃಢಪಟ್ಟಿದೆ. ದಯವಿಟ್ಟು ಸುರಕ್ಷಿತವಾಗಿರಿ ಎಂದು ಎಲ್ಲರಿಗೂ ವಿನಂತಿಸಿಕೊಳ್ಳುತ್ತೇನೆ. ನಮ್ಮೆಲ್ಲರಿಗೂ ಇದು ಅತ್ಯಂತ ಕಠಿಣ ಸಮಯ. ಒಂದು ವಾರದಲ್ಲಿ ನಾನು ಚೇತರಿಸಿಕೊಳ್ಳುತ್ತೇನೆ ಎಂಬ ಭರವಸೆ ಇದೆ ಎಂದು ಪಂಕಜ್ ಅಡ್ವಾಣಿ ಹೇಳಿದ್ದಾರೆ ಟ್ವೀಟ್ ಮಾಡಿದ್ದಾರೆ.