ಕರ್ನಾಟಕ

karnataka

ETV Bharat / sports

ಯೂತ್ ಬಾಕ್ಸಿಂಗ್; ಇಂದು ಕೂಡ 7 ಬಾಕ್ಸರ್​ಗಳಿಂದ ಸೆಮಿಫೈನಲ್ ಪ್ರವೇಶ - ಯೂತ್​ ವರ್ಲ್ಡ್ ಬಾಕ್ಸಿಂಗ್​ ಚಾಂಪಿಯನ್​ಶಿಪ್​

20 ಸದಸ್ಯರು ಭಾಗವಹಿಸಿರುವ ಈ ಟೂರ್ನಿಯಲ್ಲಿ 11 ಪದಕಗಳು ಭಾರತಕ್ಕೆ ಖಚಿತವಾಗಿವೆ. ಸೋಮವಾರ ವಿಂಕಾ, ಆಲ್ಫಿಯಾ, ಗೀತಿಕಾ ಹಾಗೂ ಪೂನಮ್ ಕೂಡ ಸೆಮಿಫೈನಲ್ ಪ್ರವೇಶಿಸಿ ಕನಿಷ್ಠ ಕಂಚು ಪದಕವನ್ನು ಖಚಿತಪಡಿಸಿಕೊಂಡಿದ್ದರು.

ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ ಶಿಪ್
ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ ಶಿಪ್

By

Published : Apr 20, 2021, 3:43 PM IST

ನವದೆಹಲಿ:ಪೋಲೆಂಡ್​ನ ಕೀಲ್ಸ್​​ನಲ್ಲಿ ನಡೆಯುತ್ತಿರುವ ಯೂತ್​ ವರ್ಲ್ಡ್ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ 7 ಬಾಕ್ಸರ್​ಗಳು ಸೆಮಿಫೈನಲ್ ಪ್ರವೇಶಿಸಿದ್ದಾರೆ. ನಿನ್ನೆ ನಾಲ್ವರು ಉಪಾಂತ್ಯಕ್ಕೆ ಎಂಟ್ರಿಕೊಟ್ಟು 4 ಪದಕ ಖಚಿತಪಡಿಸಿದ್ದರು.

ಇಂದು ಮಹಿಳೆಯರ ವಿಭಾಗದಲ್ಲಿ ಬಾಬಿರೋಜಿಸಾನ ಚಾನು (51 ಕೆಜಿ) ಮತ್ತು ಅರುಂಧತಿ ಚೌಧರಿ (69 ಕೆಜಿ), ಸನಾಮಾಚಾ ಚಾನು(75ಕೆಜಿ) ಸೆಮಿಫೈನಲ್​ ಪ್ರವೇಶಿಸಿದರೆ, ಪುರುಷರಲ್ಲಿ ಅಂಕಿತ್​ ನರ್ವಾಲ್ (64ಕೆಜಿ), ವಿಶಾಲ್ ಗುಪ್ತಾ (91ಕೆಜಿ), ಬಿಶ್ವಾಮಿತ್ರ ಚೊಂಗ್ಥಮ್(49ಕೆಜಿ) ಮತ್ತು ಸಚಿನ್(56ಕೆಜಿ) 7ನೇ ದಿನವಾದ ಇಂದು ನಾಲ್ಕರ ಘಟ್ಟ ತಲುಪುವುದರ ಮೂಲಕ ಭಾರತಕ್ಕೆ ಕನಿಷ್ಠ 7 ಕಂಚಿನ ಪದಕವನ್ನು ಖಚಿತ ಪಡಿಸಿದ್ದಾರೆ.

20 ಸದಸ್ಯರು ಭಾಗವಹಿಸಿರುವ ಈ ಟೂರ್ನಿಯಲ್ಲಿ 11 ಪದಕಗಳು ಭಾರತಕ್ಕೆ ಖಚಿತವಾಗಿವೆ. ಸೋಮವಾರ ವಿಂಕಾ, ಆಲ್ಫಿಯಾ, ಗೀತಿಕಾ ಹಾಗೂ ಪೂನಮ್ ಕೂಡ ಸೆಮಿಫೈನಲ್ ಪ್ರವೇಶಿಸಿ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದರು.

51 ಕೆಜಿ ವಿಭಾಗದಲ್ಲಿ ಬಾಬಿರೋಜಿಸಾನ ಚಾನು ಯುರೋಪಿಯನ್ ಚಾಂಪಿಯನ್​ ಅಲೆಕ್ಸಾಸ್​ ಕುಬಿಕಾ ಅವರನ್ನು 5-0 ಅಂತರದಲ್ಲಿ ಮಣಿಸಿದ್ದು, ಇಂದಿನ ವಿಶೇಷವಾಗಿತ್ತು.

ಆದರೆ ಮನೀಶ್(75 ಕೆಜಿ) ಮತ್ತು ಸುಮಿತ್(69ಕೆಜಿ) ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.

ಇದನ್ನು ಓದಿ:ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ : ಭಾರತದ ನಾಲ್ವರು ಮಹಿಳಾ ಬಾಕ್ಸರ್​ಗಳಿಗೆ ಪದಕ ಖಚಿತ

ABOUT THE AUTHOR

...view details