ಬೆಂಗಳೂರು: ಭಾನುವಾರ ನಡೆದ 'ಟಿಸಿಎಸ್ ವರ್ಲ್ಡ್ 10 ಕಿಮೀ' ಬೆಂಗಳೂರು ಓಟವನ್ನು 5 ತಿಂಗಳ ಗರ್ಭಿಣಿಯೊಬ್ಬರು 62 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಅಂಕಿತಾ ಗೌರ್ ಎಂಬುವವರೇ ಈ ಸಾಧನೆ ಮಾಡಿರುವ ಗರ್ಭಿಣಿ.
ಕಳೆದ 9 ವರ್ಷಗಳಿಂದಲೂ ನಿರಂತರವಾಗಿ ಓಡುವ ಅಭ್ಯಾಸ ಹೊಂದಿರುವ ಅಂಕಿತಾ, ತಮಗೆ ಓಡುವುದು ಉಸಿರಾಟದಂತೆ ಎಂದು ಭಾವಿಸುತ್ತಾರೆ. ಓಡುವ ಕಲೆ ಅವರಿಗೆ ಸಹಜವಾಗಿಯೇ ಬಂದಿದೆ.
" ಇದು ಕಳೆದ ಒಂಬತ್ತು ವರ್ಷಗಳಿಂದ, ನಿತ್ಯ ನಾನು ಮಾಡುತ್ತಿರುವ ಕೆಲಸವಾಗಿದೆ. ಬೆಳಗ್ಗೆ ಏಳುವುದು, ನಂತರ ರನ್ನಿಂಗ್ ಮಾಡುವುದು ನಿರಂತರವಾಗಿದೆ, ಖಂಡಿತವಾಗಿಯೂ, ಗಾಯಗೊಂಡಾಗ ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗ, ಓಡುವುದರಿಂದ ಹಿಂದೆ ಸರಿಯುವ ಸಮಯವಾಗಿರುತ್ತದೆ. ಇದನ್ನು ಹೊರತುಪಡಿಸಿ ನಾನು 9 ವರ್ಷಗಳಿಂದ ನಿಯಮಿತವಾಗಿ ಓಡುತ್ತಿದ್ದೇನೆ, ಆದ್ದರಿಂದ ಇದು ನನಗೆ ಉಸಿರಾಟದಂತಿದೆ. ಇದು ನನಗೆ ಬಹಳ ಸ್ವಾಭಾವಿಕವಾಗಿ ಬರುತ್ತದೆ " ಎಂದು ಅವರು ಹೇಳಿದ್ದಾರೆ.
ಗರ್ಭಾವಸ್ಥೆಯಲ್ಲಿ ಓಡುವುದು ಒಳ್ಳೆಯ ವ್ಯಾಯಾಮ. ಅಲ್ಲದೆ, ನೀವು ಅಮೇರಿಕನ್ ಕೌನ್ಸಿಲ್ ಆಫ್ ಹೆಲ್ತ್ ಅನ್ನು ನೋಡಿ, ಅದು ನೀವು ಓಟಗಾರರಾಗಿದ್ದರೆ ಈ ಸಂದರ್ಭದಲ್ಲಿ ಓಡುವುದನ್ನು ಸಂಪೂರ್ಣವಾಗಿ ಸರಿ ಎಂದು ಶಿಫಾರಸು ಮಾಡಿದೆ. ವಾಸ್ತವವಾಗಿ, ಮಗುವಿನ ಬೆಳವಣಿಗೆಗೆ ಇದು ತುಂಬಾ ಒಳ್ಳೆಯದು, ಆದ್ದರಿಂದ ನಾನು ಇದರ ಜೊತೆ ಹೋಗಲು ಬಯಸುತ್ತೇನೆ "ಎಂದು ಅಂಕಿತಾ ಹೇಳಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬೆಂಗಳೂರು ಮೂಲದ 35 ವರ್ಷದ ಅಂಕಿತಾ 2013 ರಿಂದಲೂ ಟಿಸಿಎಸ್ ವರ್ಲ್ಡ್ 10ಕಿ.ಮೀ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಬರ್ಲಿನ್ (ಮೂರು ಬಾರಿ), ಬೋಸ್ಟನ್ ಮತ್ತು ನ್ಯೂಯಾರ್ಕ್‌ನಂತಹ ಐದು - ಆರು ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ನೀವು ಈ ಸ್ಪರ್ಧೆಗೆ ಹೇಗೆ ತಯಾರಾದಿರಿ ಎಂದು ಕೇಳಿದ್ದಕ್ಕೆ, ನಾನು ದಿನವೂ ನಿರಂತರವಾಗಿ 5-8 ಕಿ.ಮೀ. ಅನ್ನು ನಿಧಾನವಾಗಿ ಓಡುತ್ತೇನೆ. ರನ್ನಿಂಗ್ ಮತ್ತು ವಾಕಿಂಗ್ ಮಧ್ಯೆ ಕೆಲವು ಬಾರಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಏಕೆಂದರೆ ನಾನು 5 ತಿಂಗಳ ಗರ್ಭಿಣಿ. ನನ್ನ ದೇಹ ಹಿಂದಿಗಿಂತಲೂ ತುಂಬಾ ವಿಭಿನ್ನವಾಗಲಿದೆ. ಆದರೆ, ಈ ಹಿಂದೆ ನಾನು ಟಿಸಿಎಲ್ 10ಕೆ ನಲ್ಲಿ ಪದಕ ಪಡೆದಿದ್ದೇನೆ. ಆದರೆ ಈ ಬಾರಿ ನನ್ನಿಂದ ಸಾಧ್ಯವಾಗಲಿಲ್ಲ. ಏಕೆಂದರೆ ನಾನು ರನ್ನಿಂಗ್ ಮಧ್ಯೆ ಬ್ರೇಕ್ ತೆಗೆದುಕೊಂಡು ನಡೆಯುತ್ತಿದ್ದೆ ಎಂದು ಅಂಕಿತಾ ತಿಳಿಸಿದ್ದಾರೆ.