ಲೌಸೇನ್:ಇಬ್ಬರು ರೊಮೇನಿಯನ್ ವೇಟ್‌ಲಿಫ್ಟರ್‌ಗಳು 2012ರ ಒಲಿಂಪಿಕ್ ವೇಳೆ ಉದ್ದೀಪನ ಮದ್ದು ತೆಗೆದುಕೊಂಡಿರುವುದು ಸಾಬೀತಾಗಿದ್ದು, ಅವರಿಂದ 2012ರ ಲಂಡನ್ ಒಲಿಂಪಿಕ್ಸ್ ಪದಕಗಳನ್ನು ವಾಪಸ್ ಪಡೆಯಲಾಗಿದೆ.
ಬೆಳ್ಳಿ ಪದಕ ವಿಜೇತ ರೊಕ್ಸಾನಾ ಕೊಕೊಸ್ ಮತ್ತು ಕಂಚಿನ ಪದಕ ವಿಜೇತ ರಜ್ವಾನ್ ಮಾರ್ಟಿನ್ ತಮ್ಮ ಮಾದರಿಗಳ ಮರು ವಿಶ್ಲೇಷಣೆಯಲ್ಲಿ ಸ್ಟಿರಾಯ್ಡ್ ತೆಗೆದುಕೊಂಡಿರುವುದು ಸಾಬೀತಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ.
ರೊಮೇನಿಯನ್ ವೇಟ್‌ಲಿಫ್ಟರ್ ಗೇಬ್ರಿಯಲ್ ಸಿಂಕ್ರೈನ್, ತನ್ನ ಲಂಡನ್ ಮಾದರಿಯಲ್ಲಿ ಸ್ಟಿರಾಯ್ಡ್ ತೆಗೆದುಕೊಂಡಿರುವುದು ಗೊತ್ತಾಗಿದೆ. ಮೂರನೇ ಬಾರಿ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾದ ಕಾರಣ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನಿಂದ ಜೀವಾವಧಿ ನಿಷೇಧ ಎದುರಿಸುತ್ತಿದ್ದಾರೆ.
2012ರ ಒಲಿಂಪಿಕ್ಸ್‌ನಲ್ಲಿ ರೊಮೇನಿಯಾದ ವೇಟ್‌ಲಿಫ್ಟಿಂಗ್ ತಂಡದ ನಾಲ್ವರು ಸದಸ್ಯರನ್ನು ಐಒಸಿ ಅನರ್ಹಗೊಳಿಸಿದೆ. ಇತ್ತೀಚಿನ ಐಒಸಿ ಅಂಕಿ-ಅಂಶಗಳ ಪ್ರಕಾರ, 2008ರ ಬೀಜಿಂಗ್ ಒಲಿಂಪಿಕ್ಸ್‌ಗಿಂತ 2012ರ ಲಂಡನ್ ಒಲಿಂಪಿಕ್ನಲ್ಲಿ ಹೆಚ್ಚು ಡೋಪಿಂಗ್ ಪ್ರಕರಣಗಳು(77) ಪತ್ತೆಯಾಗಿವೆ.