ತೆಲಂಗಾಣ:ಕತಾರ್ನ ದೋಹಾದಲ್ಲಿ ನಡೆದ 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತ ಪ್ರತಿನಿಧಿಸಿದ ಹೈದರಾಬಾದ್ನ 14 ವರ್ಷದ ಇಶಾ ಸಿಂಗ್ 3 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್: ಮೂರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ 14ರ ಬಾಲೆ!
14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಹೈದರಾಬಾದ್ನ 14 ವರ್ಷದ ಇಶಾ ಸಿಂಗ್ 3 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.
14th Asian Shooting Championship
ಈ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿದ್ದ 38 ಮಂದಿ ಶೂಟರ್ಗಳಲ್ಲಿ ಇಶಾ ಸಿಂಗ್ ಒಬ್ಬರು. 2022ರ ಯುವ ಒಲಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿರುವ ಇಶಾ, ಚಿಕ್ಕ ವಯಸ್ಸಿನಲ್ಲೇ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕಗಳಿಸಿ ಭಾರತೀಯರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ.
9ನೇ ವಯಸ್ಸಿನಲ್ಲಿ ಶೂಟಿಂಗ್ ಆರಂಭಿಸಿದೆ. ಈ ಚಾಂಪಿಯನ್ ಶಿಪ್ಗಾಗಿ ಕಠಿಣ ತರಬೇತಿ ಪಡೆದಿದ್ದೇನೆ. ಕಷ್ಟಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಇತ್ತು. ಅದೀಗ ನಿಜವಾಗಿದೆ ಎನ್ನುತ್ತಾರೆ ಇಶಾಸಿಂಗ್.